ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

21ರಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

Lingaraj Badiger
Updated On : 15 Mar 2014, 12:39 pm

ಕಂಪ್ಲಿ: ಒಂದು ವರ್ಷದಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಮಾ. 21ರಂದು ಇಲ್ಲಿನ ಪುರಸಭಾಂಗಣದಲ್ಲಿ ಜರುಗಲಿದೆ.
ಚುನಾವಣಾಧಿಕಾರಿಗಳಾಗಿ ಹೊಸಪೇಟೆಯ ಸಹಾಯಕ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ. ಪುರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ- ಅ (ಮಹಿಳೆ), ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಮಹಿಳೆ) ಮೀಸಲಿಡಲಾಗಿದೆ. ಮಾ. 21ರಂದು ಸಂಜೆ 4 ಗಂಟೆಯಿಂದ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಸಂಜೆ 4 ಗಂಟೆಯಿಂದ 6 ಗಂಟೆ ತನಕ ನಾಮಪತ್ರ ಸ್ವಿಕಾರ, 6 ಗಂಟೆಯಿಂದ 6.30ರ ತನಕ ನಾಮಪತ್ರ ಪರಿಶೀಲನೆ, 6.30ರಿಂದ 7 ಗಂಟೆ ತನಕ ನಾಮಪತ್ರ ವಾಪಸಾತಿ ಪಡೆಯಲು ಸಮಯ ನಿಗದಿ ಪಡಿಸಿದ್ದು, ನಂತರ ಸಂಜೆ 7 ಗಂಟೆಗೆ ಚುನಾವಣೆ ಜರುಗಲಿದೆ. ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಚುನಾವಣೆಗಾಗಿ ತಹಸೀಲ್ದಾರರಿಂದ ಪಡೆದ ಜಾತಿ ಧೃಡೀಕರಣ ಪತ್ರ ಲಗತ್ತಿಸಬೇಕು ಎಂದು ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾರರ ನೋಂದಣಿಗೆ ಜಾಗೃತಿ ಅಭಿಯಾನ
ಹೊಸಪೇಟೆ: ಮತದಾರರ ನೋಂದಣಿ ಜಾಗೃತಿ ಅಭಿಯಾನ ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯಿತು. 18 ವರ್ಷ ತುಂಬಿದ ಎಲ್ಲ ಯುವಕ, ಯುವತಿಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಈ ಅಭಿಯಾನದಲ್ಲಿ ಜಾಗೃತಿ ಮೂಡಿಸಲಾಗಿದೆ. ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು.
ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ, ಜಿಪಂ ನಿರ್ದೇಶನದಂತೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತದಾರರ ನೋಂದಣಿ ಜಾಗೃತಿ ಅಭಿಯಾನ ನಡೆಸಿಕೊಟ್ಟಿತು. ಹೊಸಪೇಟೆ ನಗರ, ತಾಲೂಕಿನ ನಂದಿ ಬಂಡಿ, ಕಾಳಘಟ್ಟ, ಮರಿಯಮ್ಮನಹಳ್ಳಿ, ಹೊಸ ಮಲಪನಗುಡಿ, ಕಮಲಾಪುರ, ಕಡ್ಡಿರಾಂಪುರ ಗ್ರಾಮಗಳಲ್ಲಿ ಜಾಗೃತಿ ಅಭಿಯಾನ ನಡೆಯಿತು ಎಂದು ತಾಲೂಕು ಸಹಾಯಕ ಅಧಿಕಾರಿ ಮಧುಸೂದನ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement