ಮುಂಗಡವಾಗಿ ಆದಾಯ ತೆರಿಗೆ ಪಾವತಿಸಿ: ಪಾಂಡುರಂಗ
ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಮಾ. 14
ಆದಾಯ ಬಂದ ವರ್ಷದಲ್ಲಿ ತೆರಿಗೆ ಪಾವತಿಯನ್ನು ಮುಂಗಡವಾಗಿ ಪಾವತಿಸುವುದರಿಂದ ದಂಡ ಹಾಗೂ ಇತರೆ ಕ್ರಮಗಳಿಂದ ತೊಂದರೆ ಅನುಭವಿಸುವುದು ತಪ್ಪುತ್ತದೆ ಎಂದು ಆದಾಯ ತೆರಿಗೆ ಅಧಿಕಾರಿ ಪಾಂಡುರಂಗ ತಿಳಿಸಿದರು.
ಪಟ್ಟಣದ ಆಭಯಾಂಜನೇಯ ದೇವಸ್ಥಾನದಲ್ಲಿ ಗುರುವಾರ ಆದಾಯ ತೆರಿಗೆ ಇಲಾಖೆಯಿಂದ ಏರ್ಪಡಿಸಿದ್ದ ಮುಂಗಡ ಆದಾಯ ತೆರಿಗೆ ಪಾವತಿ ಮಾಡುವ ಕುರಿತು ವ್ಯಾಪಾರಸ್ಥರ ಹಾಗೂ ಉದ್ದಿಮೆದಾರರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
60 ವರ್ಷ ಮೇಲ್ಪಟ್ಟವರು ವ್ಯಾಪಾರದಿಂದ ಆದಾಯ ಇಲ್ಲದೇ ಇದ್ದರೆ ತೆರಿಗೆ ಪಾವತಿಸುವುದಕ್ಕೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಆದಾಯ ತೆರಿಗೆ ಜಂಟಿ ಆಯುಕ್ತ ಸುಕುಮಾರ್, ಆಡಿಟರ್ ರವೀಂದ್ರನಾಥ್, ನಾಗನಗೌಡ, ಎನ್.ಜಿ. ಬಸವರಾಜಪ್ಪ, ಸಿದ್ದಾರೆಡ್ಡಿ, ಮುಳ್ಳುರು ಪಂಪಾಪತಿ ಶೆಟ್ಟಿ ಉಪಸ್ಥಿತರಿದ್ದರು.