ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿ: 680 ಗೋಡೆ ಗಡಿಯಾರ ವಶ

Lingaraj Badiger
Updated On : 21 Mar 2014, 11:52 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 20
ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ನಾಯಕ ವೈ.ಎಸ್. ಜಗನ್ಮೋಹನ್ ರೆಡ್ಡಿ ಹಾಗೂ ರಾಯದುರ್ಗ ಶಾಸಕ ರಾಮಚಂದ್ರ ರೆಡ್ಡಿ ಅವರ ಭಾವಚಿತ್ರ, ಫ್ಯಾನ್ ಚಿಹ್ನೆಯುಳ್ಳ 680 ಗೋಡೆ ಗಡಿಯಾರಗಳನ್ನು ಬಳ್ಳಾರಿ ನಗದ ಡಿವೈಎಸ್ಪಿ ನೇತೃತ್ವದ ತಂಡ ಗುರುವಾರ ಸಂಜೆ ದಾಳಿ ಮಾಡಿ ವಶಪಡಿಸಿಕೊಂಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮುರುಗಣ್ಣನವರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ತಂಡ ನಗರದ ಬುಡಾ ಕಾಂಪ್ಲೆಕ್ಸ್‌ನ ಇಂದಿರಾ ಟ್ರಾವೆಲ್ಸ್‌ನಲ್ಲಿ ಪರಿಶೀಲನೆ ನಡೆಸಿದಾಗ, 10 ಬಾಕ್ಸ್‌ಗಳಲ್ಲಿ ಆಂಧ್ರಪ್ರದೇಶದ ವೈಎಸ್‌ಆರ್ ಪಕ್ಷಕ್ಕೆ ಸೇರಿದ 680 ಗೋಡೆ ಗಡಿಯಾರಗಳು ಪತ್ತೆಯಾಗಿದ್ದು, ವಶಕ್ಕೆ ತೆಗೆದುಕೊಂಡಿದ್ದಾರೆ.
ಗೋಡೆ ಗಡಿಯಾರದ ಮೇಲೆ ವೈಎಸ್‌ಆರ್ ಪಕ್ಷದ ಸಂಸ್ಥಾಪಕ ವೈ.ಎಸ್. ಜಗನ್ಮೋಹನ್ ರೆಡ್ಡಿ, ರಾಯದುರ್ಗ ಶಾಸಕ ರಾಮಚಂದ್ರ ರೆಡ್ಡಿ ಅವರ ಭಾವಚಿತ್ರ ಹಾಗೂ ವೈಎಸ್‌ಆರ್ ಪಕ್ಷದ ಚಿಹ್ನೆ ಫ್ಯಾನ್ ಗುರುತು ಹಾಕಲಾಗಿದೆ. ಬೆಂಗಳೂರಿನ ಕಲ್ಯಾಸಿಪಾಳ್ಯದಿಂದ ಇಂದಿರಾ ಟ್ರಾವೆಲ್ಸ್‌ನಲ್ಲಿ ಮೂರ್ತಿ ಎಂಬುವರು ಇವುಗಳನ್ನು ತಂದಿದ್ದು, ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಗೆ ಒಯ್ಯುವ ಸಾಧ್ಯತೆ ಇತ್ತು ಎನ್ನಲಾಗಿದೆ. ಮಾ. 18ರಂದು 20 ಬಾಕ್ಸ್‌ಗಳನ್ನು ಸಾಗಿಸಲಾಗಿದೆ ಎಂಬ ಮಾಹಿತಿಯೂ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಮೂರ್ತಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ವಾರ್ಷಿಕ ಸ್ನೇಹ ಸಮ್ಮೇಳನ
ಯಲ್ಲಾಪುರ: ಪಟ್ಟಣದ ಸಂಸ್ಕೃತಿ ಸೇವಾ ಸಂಸ್ಥೆಯ ಬಾಲಮಂದಿರ ಮಾತೃ ಮಂದಿರದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಸಮಾರಂಭ ಇತ್ತೀಚೆಗೆ ಟಿಎಸ್‌ಎಸ್‌ನ ಹಳೆ ಕಟ್ಟಡದ ಆವರಣದಲ್ಲಿ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿ, ಬಹುಮಾನ ವಿತರಿಸಿದ ಟಿಎಸ್‌ಎಸ್ ನಿರ್ದೇಶಕ ವಿಶ್ವನಾಥ ಜೋಶಿ ಮಾತನಾಡಿ, 13 ವರ್ಷಗಳಿಂದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಮಾತೃ ಸ್ವರೂಪಿಗಳು ನೀಡಿದ ಸಂಸ್ಕಾರ, ಸಂಸ್ಕೃತಿಗಳು ಉತ್ತಮ ನಾಗರಿಕರಾಗಿ ಬದುಕಲು ಸಹಕಾರಿ ಎಂದರು. ಇನ್ನೋರ್ವ ಅತಿಥಿ ಟಿಎಸ್‌ಎಸ್‌ನ ಸಲಹಾ ಸಮಿತಿ ನಿರ್ದೇಶಕ ನರಸಿಂಹ ಭಟ್ಟ ಗುಂಡ್ಕಲ್ ಮಾತನಾಡಿ, ಮನೆಯಲ್ಲಿ ತಾಯಿ ನೀಡುವ ರೀತಿಯಲ್ಲೇ ಶಿಕ್ಷಕಿಯರು ಸಂಸ್ಕಾರ ನೀಡುತ್ತಿರುವುದು ಮಾತೃ ಮಂದಿರದ ಶೋಭೆ ಹೆಚ್ಚಿಸಿದೆ ಎಂದರು. ಸಂಸ್ಕೃತಿ ಸೇವಾ ಸಂಸ್ಥೆ ಗೌರವಾಧ್ಯಕ್ಷ ರಾಮು ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ದಿನೇಶ ಹೆಗಡೆ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಕೃಷ್ಣ ಬಾಳ್ಕಲ್ ಸ್ವಾಗತಿಸಿದರು. ಶಿಕ್ಷಕಿಯರಾದ ಉಷಾ ಪೈ, ಸುಮಂಗಲಾ ಜೋಶಿ, ಇಂದಿರಾ ಭಟ್ಟ ಪುಷ್ಪ ಗುಚ್ಚ ನೀಡಿದರು. ನಿರ್ದೇಶಕರಾದ ನಾಗರಾಜ ಮದ್ಗುಣಿ ನಿರ್ವಹಿಸಿದರು. ಪ್ರಕಾಶ ಕಟ್ಟಿಮನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement