ಮತದಾರರ ಜಾಗೃತಿ ಬೈಕ್‌ರ್ಯಾಲಿ
ಸಿರುಗುಪ್ಪ: ಮತದಾರರು ಕಡ್ಡಾಯವಾಗಿ ಮತ ಹಾಕುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ತಹಸೀಲ್ದಾರ್ ವೆಂಕನಗೌಡ ಪಾಟೀಲ್ ತಿಳಿಸಿದರು.
ಪಟ್ಟಣದಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಮತದಾನದ ಜಾಗೃತಿಯ ಬೈಕ್‌ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು. ನೂರಾರು ಶಿಕ್ಷಕರು ಬೈಕ್‌ಗಳಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತ ಹೈಸ್ಕೂಲ್ ಮೈದಾನದಿಂದ ಟಿಪ್ಪುಸುಲ್ತಾನ್ ಸರ್ಕಲ್‌ವರೆಗೆ ಬೈಕ್‌ರ್ಯಾಲಿ ನಡೆಸಿದರು.
ಪುರಸಭೆ ಮುಖ್ಯಾಧಿಕಾರಿ ಹಾಜಿ ಬಾಬು, ತಾಲೂಕು ಪಂಚಾಯಿತಿ ಇಒ ರಾಧಾಕೃಷ್ಣ ರೆಡ್ಡಿ, ದೊಡ್ಡನಗೌಡ ಇನ್ನಿತರರು ಉಪಸ್ಥಿತರಿದ್ದರು.