ಅನ್ಯಾಯದ ವಿರುದ್ಧ ಮಹಿಳೆಯರು ಒಗ್ಗಟ್ಟು ಪ್ರದರ್ಶಿಸಿ: ಮಂಜುನಾಥ
ಕೊಟ್ಟೂರು: ಮಹಿಳೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ನ್ಯಾಯದಡಿ ಸ್ಥಾನ ಪಡೆಯುವಲ್ಲಿ ಅನ್ಯಾಯದ ವಿರುದ್ಧ ಹೋರಾಡಲು ಒಗ್ಗಟ್ಟು ಪ್ರದರ್ಶಿಸಬೇಕು. ಯಾರ ಸಹಾಯ, ಸಹಕಾರ ಯಾಚಿಸದೇ ಸ್ವಾವಲಂಬಿತನ ಮೈಗೂಡಿಸಿಕೊಳ್ಳುವತ್ತ ಮುಂದಾಗಬೇಕು ಎಂದು ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಜಿ. ಮಂಜುನಾಥ ಹೇಳಿದರು.
ಪಟ್ಟಣದ ಕಿತ್ತೂರು ರಾಣಿ ಮಹಿಳಾ ಸಮಾಜದ ವತಿಯಿಂದ ಈಚೆಗೆ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ಕಲಿಕೆಯ ಮೂಲಕ ತಮ್ಮ ಬದುಕನ್ನು ಉತ್ತಮವಾಗಿಸಿಕೊಳ್ಳಲು ಸದಾ ಮುಂದಾಗಬೇಕು. ಆದರ್ಶ ನಡೆಯನ್ನು ರೂಢಿಸಿಕೊಳ್ಳಬೇಕು ಎಂದರು. ಕೊಟ್ಟೂರೇಶ್ವರ ವಿದ್ಯಾಪ್ರಸಾರ ಪರಿಷತ್ನ ಸರೋಜಾ ಪಂಪಾಪತಿ, ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸಮಾಜದ ಅಧ್ಯಕ್ಷೆ ಅರಮನಿ ನಾಗರತ್ನಮ್ಮ ಮಾತನಾಡಿ, ಮಹಿಳೆ ತನ್ನ ದುಡಿಮೆ ಹಣವನ್ನು ಗಳಿಕೆಯನ್ನಾಗಿ ಮಾಡಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು. ಅರಮನಿ ರೇವಣ್ಣ, ಡಾ. ಕೊಟ್ರೇಶ್, ಎಂ. ಮಂಜುಳಾ ಕೊಟ್ರೇಶ್ ಪಾಲ್ಗೊಂಡಿದ್ದರು. ಅರಮನಿ ಸುಮಾ ಮಹೇಶ್, ಕೊಟ್ರಮ್ಮ, ಹಳ್ಳಿ ನಾಗರತ್ನಮ್ಮ ವೇದಿಕೆಯಲ್ಲಿದ್ದರು.