ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಎಸ್ಸೆಸ್ಸೆಲ್ಸಿ ಪರೀಕ್ಷೆ: 27,264 ವಿದ್ಯಾರ್ಥಿಗಳು ಹಾಜರು: ಜತ್ತಿ

Mainashree
Updated On : 29 Mar 2014, 10:10 am

ಬಳ್ಳಾರಿ: ಜಿಲ್ಲಾದ್ಯಂತ ಶುಕ್ರವಾರದಿಂದ ಪ್ರಾರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಥಮ ಭಾಷೆ ವಿಷಯಕ್ಕೆ 27,264 ವಿದ್ಯಾರ್ಥಿಗಳು ಹಾಜರಾಗಿದ್ದು, 893 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಈ ಪರೀಕ್ಷೆಗೆ ಒಟ್ಟು 28,157 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು ಎಂದು ಡಿಡಿಪಿಐ ವೀರಣ್ಣ ಎಸ್. ಜತ್ತಿ ತಿಳಿಸಿದ್ದಾರೆ.
ಪರೀಕ್ಷೆ ಬರೆದವರ ಪೈಕಿ 15,201 ವಿದ್ಯಾರ್ಥಿಗಳು ಹಾಗೂ  12,063 ವಿದ್ಯಾರ್ಥಿನಿಯರಿದ್ದು, 15,779 ವಿದ್ಯಾರ್ಥಿಗಳು ಹಾಗೂ 12,378 ವಿದ್ಯಾರ್ಥಿನಿಯರು ಸೇರಿ 28,157 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಈ ಪರೀಕ್ಷೆಗೆ 578 ವಿದ್ಯಾರ್ಥಿಗಳು ಹಾಗೂ 315 ವಿದ್ಯಾರ್ಥಿನಿಯರು ಸೇರಿ ಒಟ್ಟು 893 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಪರೀಕ್ಷೆ ಬರೆದವರ, ಗೈರು ಹಾಜರಾದವರ ಹಾಗೂ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡವರ ತಾಲೂಕುವಾರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳ ವಿವರ ಇಂತಿದೆ.  
ಬಳ್ಳಾರಿ ಪೂರ್ವ - 2003 (ಗಂ) ಹಾಗೂ 1284 (ಹೆ) ಸೇರಿ ಒಟ್ಟು 3,287 ವಿದ್ಯಾರ್ಥಿಗಳು ಹಾಜರಾಗಿದ್ದು, 111 (ಗಂ) ಹಾಗೂ 52 (ಹೆ) ಸೇರಿ 163 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 2,114 ವಿದ್ಯಾರ್ಥಿಗಳು ಹಾಗೂ 1,336 ವಿದ್ಯಾರ್ಥಿನಿಯರು ಸೇರಿ 3,450 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು.
ಕುರುಗೋಡು - 3,362 (ಗಂ) ಹಾಗೂ 2,664 (ಹೆ) ಸೇರಿ ಒಟ್ಟು 6,026 ವಿದ್ಯಾರ್ಥಿಗಳು ಹಾಜರಾಗಿದ್ದು, 94 (ಗಂ), 46 (ಹೆ) ಸೇರಿ 140 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  3,456 ವಿದ್ಯಾರ್ಥಿಗಳು ಹಾಗೂ 2,710 ವಿದ್ಯಾರ್ಥಿನಿಯರು ಸೇರಿ 6,166 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದರು.
ಹಗರಿಬೊಮ್ಮನಹಳ್ಳಿ - 1,177 (ಗಂ) ಹಾಗೂ 999 (ಹೆ) ಸೇರಿ ಒಟ್ಟು 2,176 ವಿದ್ಯಾರ್ಥಿಗಳು ಹಾಜರಾಗಿದ್ದು, 49 (ಗಂ) ಹಾಗೂ 24 (ಹೆ) ಸೇರಿ 73 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 1,226 ವಿದ್ಯಾರ್ಥಿಗಳು, 1,023 ವಿದ್ಯಾರ್ಥಿನಿಯರು ಸೇರಿ 2,249 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದರು.
ಹಡಗಲಿ - 1,169 (ಗಂ) ಹಾಗೂ 1,049 (ಹೆ) ಸೇರಿ ಒಟ್ಟು 2,218 ವಿದ್ಯಾರ್ಥಿಗಳು ಹಾಜರಾಗಿದ್ದು, 33 (ಗಂ) ಹಾಗೂ 36 (ಹೆ) ಸೇರಿ 69 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 1,202 ವಿದ್ಯಾರ್ಥಿಗಳು ಹಾಗೂ 1,085 ವಿದ್ಯಾರ್ಥಿನಿಯರು ಸೇರಿ 2,287 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು.
ಹೊಸಪೇಟೆ - 2,846 (ಗಂ) ಹಾಗೂ 2,502 (ಹೆ) ಸೇರಿ ಒಟ್ಟು 5,348 ವಿದ್ಯಾರ್ಥಿಗಳು ಹಾಜರಾಗಿದ್ದು, 117 (ಗಂ) ಹಾಗೂ 53 (ಹೆ) ಸೇರಿ 170 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 2,963 ವಿದ್ಯಾರ್ಥಿಗಳು ಹಾಗೂ 2,555 ವಿದ್ಯಾರ್ಥಿನಿಯರು ಸೇರಿ 5,518 ವಿದ್ಯಾರ್ಥಿಗಳು ನೋಂದಣಿ ಪಡೆದಿದ್ದರು.
ಕೂಡ್ಲಿಗಿ - 1,879 (ಗಂ) ಹಾಗೂ 1,441(ಹೆ) ಸೇರಿ ಒಟ್ಟು 3,320 ವಿದ್ಯಾರ್ಥಿಗಳು ಹಾಜರಾಗಿದ್ದು, 69 (ಗಂ) ಹಾಗೂ 61 (ಹೆ) ಸೇರಿ 130 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. 1,948 ವಿದ್ಯಾರ್ಥಿಗಳು ಹಾಗೂ 1,502 ವಿದ್ಯಾರ್ಥಿನಿಯರು ಸೇರಿ 3,450 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು.
ಸಂಡೂರು - 1,420 (ಗಂ) ಹಾಗೂ 1,083 (ಹೆ) ಸೇರಿ ಒಟ್ಟು 2,503 ವಿದ್ಯಾರ್ಥಿಗಳು ಹಾಜರಾಗಿದ್ದು, 39 (ಗಂ) ಹಾಗೂ 18 (ಹೆ) ಸೇರಿ 57 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 1,459 ವಿದ್ಯಾರ್ಥಿಗಳು ಹಾಗೂ 1,101 ವಿದ್ಯಾರ್ಥಿನಿಯರು ಸೇರಿ 2,560 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದರು.
ಸಿರುಗುಪ್ಪ - 1,345 (ಗಂ) ಹಾಗೂ 1,041 (ಹೆ) ಸೇರಿ ಒಟ್ಟು 2,386 ವಿದ್ಯಾರ್ಥಿಗಳು ಹಾಜರಾಗಿದ್ದು, 66 (ಗಂ) ಹಾಗೂ 25 (ಹೆ) ಸೇರಿ 91 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 1,411 ವಿದ್ಯಾರ್ಥಿಗಳು ಹಾಗೂ 1,066 ವಿದ್ಯಾರ್ಥಿನಿಯರು ಸೇರಿ 2,477 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement