ನಕಲಿ ಚಿನ್ನ ಮಾರಾಟ: ಆರು ವಂಚಕರ ಸೆರೆ
ಬಳ್ಳಾರಿ: ಅಸಲಿ ಎಂದು ನಕಲಿ ಚಿನ್ನದ ಆಭರಣಗಳನ್ನು ಮಾರುತಿದ್ದ ಆರು ವಂಚಕರನ್ನು ಪೊಲೀಸರು ಬಂಧಿಸಿದ ಘಟನೆ ಹೊಸ ಬಸ್ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಏಡುಕೊಂಡಲು (32), ರಾಮಲಿಂಗೇಶ್ವರಗೌಡ (23), ಜಿ. ಭಾಸ್ಕರ್ (35), ರಮೇಶ್ (23), ಚೌಡೇಶ್ (23), ರಾಜಣ್ಣ (40) ಬಂಧಿತರು. ಮೂಲತಃ ಜಗಳೂರು, ಆಂಧ್ರಪ್ರದೇಶದ ಮೆಹಬೂಬ್ ನಗರದ ನಿವಾಸಿಗಳಾದ ಇವರು ಇಲ್ಲಿನ ಹೊಸ ಬಸ್ನಿಲ್ದಾಣದಲ್ಲಿ ನಕಲಿ ಚಿನ್ನ ಮಾರುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.