ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜಾತಿ ಆವರಣದಲ್ಲಿ ನೋಡಬೇಡಿ

Lingaraj Badiger
Updated On : 2 May 2014, 12:12 pm

ಕುರುಗೋಡು: ಮನುಕುಲದ ಏಳ್ಗೆಗೆ ಶ್ರಮಿಸಿದ ಚೇತನಗಳನ್ನು ನಿರ್ದಿಷ್ಟ ಜಾತಿ ಆವರಣದಲ್ಲಿ ನೋಡುವುದು ತಪ್ಪು ಎಂದು ಮೈಸೂರು ವಿವಿ ಪತ್ರಿಕೋದ್ಯಮ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಮಹೇಶ್ ಚಂದ್ರಗುರು ಹೇಳಿದರು.
ಅವರು ತಾಲೂಕಿನ ಕುಡಿತಿನಿ ಗ್ರಾಮದ ಕೆಪಿಟಿಸಿಎಲ್ ಪ್ರಾಂಗಣದಲ್ಲಿ ಅಂಬೇಡ್ಕರ್ ಜಯಂತಿ ನಿಮಿತ್ತ ಕರ್ನಾಟಕ ವಿದ್ಯುತ್ ನಿಗಮ ಮತ್ತು ಪ.ಜಾ., ಪ.ಪಂ. ನೌಕರರ ಸಂಘ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮನುಕುಲಕ್ಕೆ ಸಮಾನತೆ ಸಾರಿದ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಲಿಂಗ ಸಮಾನತೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಸಂದರ್ಭದಲ್ಲಿ ಅವರ ಚಿಂತನೆ ಅಗತ್ಯ ಎಂದರು.
ನೌಕರರ ಸಂಘದ ಅಧ್ಯಕ್ಷ ರಾಜು, ಕೆಪಿಟಿಸಿಎಲ್ ಸ್ಥಳೀಯ ಘಟಕ ಕಾರ್ಯನಿರ್ವಾಹಕ ನಿರ್ದೇಶಕಿ ಜಿ. ರತ್ನಮ್ಮ ಉಪಸ್ಥಿತರಿದ್ದರು. ನೌಕರರಿಗಾಗಿ ಹಮ್ಮಿಕೊಂಡಿದ್ದ ಪ್ರಬಂಧ, ಆಶುಭಾಷಣ, ಪ್ರಶ್ನಾವಳಿ ಮತ್ತಿತರ ಸ್ಪರ್ಧೆಗಳ ವಿಜೇತರಿಗೆ ಎಂಜಿನಿಯರ್ ಚನ್ನಹಳ್ಳಿ ಶಿವರಾಜ್, ಸಿ.ಎಂ. ದಿವಾಕರ್, ಶಶಿಕಾಂತ್, ಎಚ್.ಆರ್. ಪ್ರೇಮನಾಥ್ ಬಹುಮಾನ ವಿತರಿಸಿದರು.
ಜಿ.ಕೆ. ಪಶುಪತಿ ನಿರ್ದೇಶಿಸಿದ 'ಧರೆಹತ್ತಿ ಉರಿದೊಡೆ' ಕಿರು ನಾಟಕ, ಹನುಮಂತರಾಯ ತಂಡ ಹಾಡಿದ ಹೋರಾಟದ ಗೀತೆ ಸಭಿಕರ ಗಮನ ಸೆಳೆದವು. ಎಂಜನಿಯರ್ ಗಂಗಾಧರ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement