ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಆಡಂಬರದ ಮೆರವಣಿಗೆ ಸಲ್ಲದು: ಗಿರಿಜಕ್ಕ

Lingaraj Badiger
Updated On : 3 May 2014, 11:55 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮೇ 2
ಬಸವಣ್ಣನ ಆದರ್ಶಗಳನ್ನು ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕಿದೆ ಹೊರತು ಆಡಂಬರದ ಮೆರವಣಿಗೆಗಳನ್ನಲ್ಲ ಎಂದು ಉಪನ್ಯಾಸಕಿ ಗಿರಿಜಕ್ಕ ಧರ್ಮರೆಡ್ಡಿ ಹೇಳಿದರು.
ನಗರದ ಚಿತ್ತವಾಡ್ಗಿ ಶ್ರೀ ಗುರು ಕಲ್ಮಠೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಸವೇಶ್ವರ 881ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಸವರಾಜ ಮಾತನಾಡಿದರು. ಸ್ಥಳೀಯ ಮುಖಂಡರಾದ ಅರಳಿ ಕೊಟ್ರಪ್ಪ, ಡೊಮ್ಮಿ ಸಣ್ಣ ಜಂಬಯ್ಯ, ವಿರೂಪಾಕ್ಷಪ್ಪ, ಶಿವಣ್ಣ, ಎಸ್.ಎಂ. ಸಂಗಮೇಶ, ಪ್ರಕಾಶ, ಪ್ರಭುದೇವ ಗ್ರಾಮಸ್ಥರು ಪಾಲ್ಗೊಂಡಿದ್ದರು. ಬಣ್ಣ, ಹೂವುಗಳಿಂದ ಅಲಂಕರಿಸಿದ್ದ 22 ಜೋಡಿ ಎತ್ತು, ಸುಮಂಗಲೆಯರು ಇದ್ದರು. ಮೆರವಣಿಗೆಯಲ್ಲಿ ತಾಳ-ಮದ್ದಲಿಯವರ ಹುಮ್ಮಸ್ಸು, ಉರಿಬಿಸಿಲಿನಲ್ಲೂ ಜೋರಾಗಿತ್ತು. ಅಲ್ಲಲ್ಲಿ ಕುಡಿಯುವ ನೀರು, ಮಧ್ಯಾಹ್ನ ಸಕಲರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement