ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಚಿಣ್ಣರ ಮೇಳದಲ್ಲಿ ದಾಲಪಟಾ ಪ್ರದರ್ಶನ

Rashmi Kasaragodu
Updated On : 4 May 2014, 12:52 pm

ಧಾರವಾಡ: ಇಲ್ಲಿಯ ರಂಗಾಯಣದಲ್ಲಿ ಚಿಣ್ಣರ ಮೇಳದ ಅಂಗವಾಗಿ ಮಕ್ಕಳಿಗೆ ದಾಲಪಟಾ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು.
ಮಲ್ಲಿಕಾರ್ಜುನ ಅಲೆಮಾರಿ ದಾಲಪಟಾ ಕಲಾವಿದರ ಸಂಘದ ಕಲಾವಿದರು ನಾಲ್ಕರ ಫಣಿ ಚಕ್ರ, ಮುಳ್ಳಿನ ಚಕ್ರ, ಲಾಟಿ ತಿರುಗಿಸುವುದು, ಕತ್ತಿವರಸೆ, ತಲೆ ಮೇಲೆ ತೆಂಗಿನಕಾಯಿ ಒಡೆಯುವುದು, ಬೆಂಕಿ ಚಕ್ರಗಳಂತಹ ಪ್ರಕಾರಗಳನ್ನು ಶಿಬಿರದ ಮಕ್ಕಳೆದುರಿಗೆ ಪ್ರದರ್ಶಿಸಿದರು ಹಾಗೂ ಯಕ್ಷಗಾನದ ವೇಷಭೂಷಣಗಳನು ಧರಿಸಿ ಮಕ್ಕಳನ್ನು ಕುಣಿಸಿದರು. ಗೊರಿಲ್ಲಾ ಮತ್ತು ಹದ್ದುಗಳ ವೇಷಧರಿಸಿ ಮಕ್ಕಳನ್ನು ಹಾಸ್ಯದ ಕಡಲಲ್ಲಿ ತೇಲಿಸಿದರು.
ಒಂದೇ ವೇದಿಕೆಯಲ್ಲಿ ಚಂಡೆಯ ನಾದದೊಂದಿಗೆ ಸಾಹಸಮಯ ದಾಲಪಟ್ಟಿ ಪ್ರಕಾರಗಳು, ಯಕ್ಷಗಾನದ ಕುಣಿತ, ಹಾಸ್ಯದ ಹೊನಲಲ್ಲಿ ಮಕ್ಕಳು ತೇಲುವಂತೆ ಮಾಡಿದರು.
ಈ ಸಂದರ್ಭದಲ್ಲಿ ಕೆ.ಎಚ್. ಚನ್ನೂರ ಕೆ. ಜಗುಚಂದ್ರ, ಕೇಶವ ಬಡಿಗೇರ, ಅಬ್ದುಲ್ ಅಜೀಜ್ ಮುಲ್ಲಾ, ಗಿರಿಜಾ ಹಿರೇಮಠ, ಮೀನಾಕ್ಷಿ ಪತ್ತಾರ, ದೀಪಾ ಕುರವತ್ತಿ, ಮಲ್ಲಪ್ಪ ಹೊಂಗಲ್, ವಿಜಯ ದೊಡಮನಿ, ಪ್ರದೀಪ ತುಮ್ಮರಮಟ್ಟಿ, ಯಲ್ಲಪ್ಪ ಗಾಣಿಗೇರ, ಕಾವೇರಿ, ರಾಜ್ ಕವಡೆನವರ, ಶಶಿಕಲಾ, ಮಂಜುನಾಥ, ರಮಾದೇವಿ, ರಮೇಶ ಚಲವಾದಿ, ರಾಜು.ಎಸ್.ಸಿ, ನಾಗರಾಜ ಪಾಟೀಲ, ಕೆ.ಖಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement