ಜ್ಞಾನಕ್ಕಾಗಿ ಸಮಾಜಸೇವೆ ಮಾಡಿ: ಕೆ ಸುಬ್ಬರಾವ್
ಬಳ್ಳಾರಿ: ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳು ಸಮಾಜ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಜ್ಞಾನ ಲಭಿಸಲಿದೆ ಎಂದು ಕೆ. ಸುಬ್ಬರಾವ್ ಹೇಳಿದರು.
ಅವರು ನಗರದ ವಿಜಯನಗರ ಶ್ರೀಕೃಷ್ಣದೇವಾರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಎ ಮತ್ತು ಬಿ ಘಟಕಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸೇವಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿವಿ ಕುಲಸಚಿವ ಕೆ. ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಜೆ ಸೋಮಶೇಖರ, ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಎಲ್.ಆರ್. ನಾಯಕ್, ಹಣಕಾಸು ಅಧಿಕಾರಿ ಜುಬೇರ, ಹೇಮಂತ್ ಕುಮಾರ ಕೇಡಿಯಾ, ಡಾ. ಎಚ್. ರಾಮಕೃಷ್ಣ, ಪ್ರೊ. ಎ.ಪಿ. ಹೊಸಮನಿ, ಡಾ. ಭೀಮನಗೌಡ, ರವಿ ನಾರಾಯಣ, ಸುನೀಲ್ ಕುಮಾರ, ಡಾ. ಹೊನ್ನೂರಾಲಿ, ಡಾ. ಮೋಹನದಾಸ, ಬಾಲಕೃಷ್ಣ, ಕೆ.ಎಂ. ಹರೀಶ ಉಪಸ್ಥಿತರಿದ್ದರು. ಡಾ. ಎಚ್. ರಾಮಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ವಯಂ ಸೇವಕರು ರಾಷ್ಟ್ರೀಯ ಸೇವಾ ಗೀತೆಗಳನ್ನು ಹಾಡಿದರು. ವಿಜಯಕುಮಾರ ಸ್ವಾಗತಿಸಿದರು. ಡಾ. ಶಾಂತಾ ನಾಯಕ್ ನಿರ್ವಹಿಸಿದರು. ಯಳವಟ್ಟಿ ವಂದಿಸಿದರು.