ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ತಾಯಮ್ಮದೇವಿಗೆ ವಿಶೇಷ ಪೂಜೆ

Rashmi Kasaragodu
Updated On : 4 May 2014, 12:52 pm

ಕಂಪ್ಲಿ: ಬಳ್ಳಾರಿ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಗೆಲವಿಗೆ ಕಂಪ್ಲಿ 16ನೇ ವಾರ್ಡ್ನ ತಾಯಮ್ಮದೇವಿಗೆ ಬಿಜೆಪಿ ಮುಖಂಡ ಯು. ರಾಮದಾಸ ಹಾಗೂ ಕಾರ್ಯಕರ್ತ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಪಿ. ಬ್ರಹ್ಮಯ್ಯ, ಬಿ. ಸಿದ್ದಪ್ಪ, ವಿ. ಗೋವಿಂದರಾಜು, ಎಪಿಎಂಸಿ ಅಧ್ಯಕ್ಷ ಎನ್. ಪುರುಷೋತ್ತಮ, ಪುರಸಭೆ ಸದಸ್ಯ ಎನ್. ರಾಮಾಂಜನೇಯಲು, ಎಸ್. ರಾಘವೇಂದ್ರ, ಬಿಜೆಪಿ ಮುಖಂಡ ಎನ್. ಮಲ್ಲಿಕಾರ್ಜುನರೆಡ್ಡಿ, ಗಂಗಾಧರರೆಡ್ಡಿ ಇದ್ದರು.


ಆಟಗಾರರು ಪ್ರತಿಭೆ  ಗುರುತಿಸಿಕೊಳ್ಳಿ
ಬಳ್ಳಾರಿ: ಗ್ರಾಮೀಣ ಭಾಗದ ಕ್ರಿಕೆಟ್ ಯುವ ಆಟಗಾರರು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡರೆ ಸದೃಢ ದೇಹ, ಆರೋಗ್ಯ ಪಡೆಯಬಹುದು ಎಂದು ಸಂಘಟನೆ ರಾಜ್ಯಾಧ್ಯಕ್ಷ ಯಾಳ್ಪಿ ವಲಿಭಾಷ ಹೇಳಿದರು. ಅವರು ತಾಲೂಕಿನ ಅಸುಂಡಿ ಗ್ರಾಮದಲ್ಲಿ ಕರ್ನಾಟಕ ಯುವ ಜಾಗೃತಿ ವೇದಿಕೆ ಆಯೋಜಿಸಿರುವ ದ್ವಿತೀಯ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಮಂಗಳವಾರ ಚಾಲನೆ ನೀಡಿ, ಮಾತನಾಡಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ರಾಣಿತೋಟ ವೀರೇಶ್ ಇ., ರಾಜ್ಯ ಖಜಾಂಚಿ ಕೆ. ರಮೇಶ್, ಜಿಲ್ಲಾ ಘಟಕದ ಪದಾಧಿಕಾರಿಗಳಾದ ವೈ. ಶಫಿ, ಅಸುಂಡಿ ಸೈಫುಲ್ಲಾ, ಕೆ.ವಿ. ಗಣೇಶ್, ಕೆ. ಯಶೋದಮ್ಮ, ವೈ. ಗೌಸಿಯಾ ಬೀ, ವಾಣಿಶ್ರೀ ಪ್ರಸಾದ್, ರುದ್ರಣ್ಣ, ಹೊನ್ನೂರ್ ಸ್ವಾಮಿ, ಗೋವರ್ಧನಗೌಡ, ಮಲ್ಲನಗೌಡ, ರೂಪನಗುಡಿ ಗೂಡುಸಾಬ್, ಮೀನಳ್ಳಿ ವಂಡ್ರಪ್ಪ, ಕಾರೇಕಲ್ಲು ಹೊನ್ನೂರಸಾಬ್, ಯಾಳ್ಪಿ ಸರ್ನಸ್, ವೈ. ಮಲ್ಲಪ್ಪ ಉಪಸ್ಥಿತದ್ದರು.
ನಾಳೆ ಅಡಿಗಲ್ಲು
ಕೊಟ್ಟೂರು: ಪಟ್ಟಣದ ವೀರಶೈವ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ಮೇ 5ರಂದು ಇಲ್ಲಿನ ಬಿಸ್ಸೆಎನ್ನೆಲ್ ಕಾರ್ಯಾಲಯದ ಹಿಂಭಾಗದಲ್ಲಿ ನಡೆಯಲಿದೆ. ವೀರಶೈವ ಪಂಚಮಸಾಲಿ ಪೀಠಾಧಿಪತಿ ಜ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಸಹಕಾರ ಸಂಘದ ಅಧ್ಯಕ್ಷ ಡಿ. ಶಿವಚರಣ ತಿಳಿಸಿದ್ದಾರೆ.
ಬೀಗ ಮುರಿದು ಚಿನ್ನ, ನಗದು ಕಳ್ಳತನ
ಸಿರುಗುಪ್ಪ: ಮನೆಯೊಂದರ ಬಾಗಿಲು ಮುರಿದು ಬೀರುವಿನಲ್ಲಿಡಲಾಗಿದ್ದ ರು. 2 ಲಕ್ಷ ಬೆಲೆಯಳ್ಳ ಬಂಗಾರ, ನಗದು ದೋಚಿರುವ ಘಟನೆ ಶುಕ್ರವಾರ ಪಟ್ಟಣದ 5ನೇ ವಾರ್ಡಿನ ಎಸ್. ಭಾಷಾ ಎಂಬುವವರ ಮನೆಯಲ್ಲಿ ಜರುಗಿದೆ. ರಾತ್ರಿ ಮನೆಯ ಮಾಳಿಗೆಯ ಮನೆಯವರೆಲ್ಲರೂ ಮಲಗಿದ್ದಾಗ ಈ ಘಟನೆ ಸಂಭವಿಸಿದ್ದು, ಯಾರೋ ಕಳ್ಳರು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.         
ಮುತ್ತಪ್ಪ ರೈ ಹುಟ್ಟುಹಬ್ಬ
ಸಿರುಗುಪ್ಪ: ಜಯಕರ್ನಾಟಕ ಸಂಘಟನೆ ವತಿಯಿಂದ ಬಸವೇಶ್ವರ ಜಯಂತಿ ಹಾಗೂ ಸಂಘಟನೆಯ ಸ್ಥಾಪಕ ಮುತ್ತಪ್ಪ ರೈ ಹುಟ್ಟುಹಬ್ಬದ ಪ್ರಯುಕ್ತ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತವಾಗಿ ಹಾಲು ಹಣ್ಣು ವಿತರಿಸಿದರು. ರಾಮಕೃಷ್ಣ, ಹುಲುಗಪ್ಪ, ದೇವಾ, ಆಸೀಪ್, ರಾಜೇಶ್, ಇಬ್ರಾಹಿಂ ಪುರಸಭೆ ಸದಸ್ಯ ಮಲ್ಲಿಕಾಜನ ಅಬ್ದುಲ್, ರಾಜ, ಲೋಕೇಶ್, ಇಮಾಮ್, ರಾಜೇಶ್ ಇನ್ನಿತರರು ಇದ್ದಾರೆ.


ಗಣಿ ಕಣಿವೆಯಲ್ಲಿ ಲಾಭ ನಷ್ಟದ ಲೆಕ್ಕಾಚಾರ


 
    
ಎ ಮತ್ತು ಬಿ ಕೆಟಗರಿ ಗಣಿ ಕಂಪನಿಗಳ ಗುತ್ತಿಗೆದಾರರಿಗೆ ದಂಡ ವಿಧಿಸುವ ಮೂಲಕ ಗಣಿಗಾರಿಕೆ ಆರಂಭಿಸಲು ಸಮ್ಮತಿಸಿದ್ದರೆ, ಸಿ ಕೆಟಗರಿಯಲ್ಲಿ ಸಾಕಷ್ಟು ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಅದನ್ನು ಜಾಗತಿಕ ಟೆಂಡರ್ ಪ್ರಕ್ರಿಯೆ ಮೂಲಕ ಹರಾಜು ಉದ್ದೇಶದಿಂದ ಎಲ್ಲ ಸಿದ್ಧತೆಯನ್ನು ಸಿಇಸಿ ಆದೇಶದಂತೆ ರಾಜ್ಯ ಸರ್ಕಾರ ಮಾಡುತ್ತಿದೆ. ಸಿ ಕೆಟಗರಿಯ ಅದಿರು ನಷ್ಟವಾಗಿರುವುದನ್ನು ಪತ್ತೆಹಚ್ಚಿ, ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣದ ಸಿದ್ಧತೆಗಳು ಭರದಿಂದ ಸಾಗಿವೆ.
ಸುರತ್ಕಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸಂಸ್ಥೆ ಪೈಲಟ್ ಪ್ರಾಜೆಕ್ಟಾಗಿ ಸಿ ಕೆಟಗರಿಯ ಕಂಪನಿಯಲ್ಲಿ ಸಂಗ್ರಹವಿರುವ ಅದಿರು ಪ್ರಮಾಣವನ್ನು ಲೆಕ್ಕ ಹಾಕುತ್ತಿದೆ. ಇದರ ಬೆನ್ನಲ್ಲೇ ಐಸಿಎಫ್ಆರ್ಇ ತಂಡ ಸಿ ಕೆಟಗರಿಯಲ್ಲಿರುವ ಪರಿಸರ ಪುನರುಜ್ಜೀವನ ಹಾಗೂ ಪುನರ್ನಿರ್ಮಾಣ (ಆರ್ ಅಂಡ್ ಆರ್) ಯೋಜನೆ ಸಿದ್ಧ ಮಾಡುತ್ತಿದೆ. ಸಿ ಕೆಟಗರಿಯಲ್ಲಿ ಆಗಿರುವ ನಷ್ಟ ಕಂಡು ಹಿಡಿಯಲು ರಾಜ್ಯ ಸರ್ಕಾರದ ಲಾಸ್ ಅಸೆಸ್ಮೆಂಟ್ ಕಮಿಟಿಯ ರಿಮೋಟ್ ಸೆನ್ಸಿಂಗ್ ಏಜೆನ್ಸಿ ಬಳ್ಳಾರಿಗೆ ಆಗಮಿಸಿದೆ.
ನಷ್ಟದ ಪತ್ತೆ ಕಾರ್ಯ: ರಿಮೋಟ್ ಸೆನ್ಸಿಂಗ್ ಏಜೆನ್ಸಿ ರಾಜ್ಯದ ಬಳ್ಳಾರಿ, ತುಮಕೂರು, ಚಿತ್ರದುರ್ಗದಲ್ಲಿರುವ ಸಿ ಕೆಟಗರಿಯ 51 ಗಣಿ ಕಂಪನಿಗಳಲ್ಲಿ ಈವರೆಗೆ ಎಷ್ಟು ಅದಿರನ್ನು ತೆಗೆಯಲಾಗಿದೆ, ಎಷ್ಟು ನಷ್ಟವಾಗಿದೆ ಎಂಬುದನ್ನು ಪತ್ತೆಮಾಡಲಿದೆ. ಜಿಡಿಪಿಎಸ್ ಹಾಗೂ ಏರಿಯಲ್ ಸರ್ವೆ ಮೂಲಕ ಸಿ ಕೆಟಗರಿಯ ಗಣಿ ಗುತ್ತಿಗೆ ಪ್ರಕಾರವಾಗಿ ನಷ್ಟವನ್ನು ಕಂಡು ಹಿಡಿದು, ವರದಿ ಸಲ್ಲಿಸಲಿದೆ. ಸಿ ಕೆಟಗರಿಯಲ್ಲಿ ಗಣಿ ಕಂಪನಿಗಳಿಂದ ಮಾಡಿರುವ ನಷ್ಟ, ಅದನ್ನು ತುಂಬುವ ನಿಟ್ಟಿನಲ್ಲಿ ಆಲೋಚನೆ ಸಾಧ್ಯವಾಗುತ್ತದೆ.
ನಷ್ಟ ತುಂಬುವ ಚಿಂತನೆ: ಎ ಮತ್ತು ಬಿ ಕೆಟಗರಿಯಲ್ಲಿ ಆರ್ ಅಂಡ್ ಆರ್ ಯೋಜನೆಯನ್ನು ಆಯಾ ಗಣಿ ಗುತ್ತಿಗೆ ಪ್ರದೇಶದವರು ಅನುಷ್ಠಾನ ಮಾಡುವ ಮೂಲಕ ಗಣಿ ಗುತ್ತಿಗೆ ಪರವಾನಿಗೆ ಪಡೆದಿದ್ದರೆ, ಸಿ ಕೆಟಗರಿಯಲ್ಲಿ ಗಣಿ ಗುತ್ತಿಗೆ ಪ್ರದೇಶದಲ್ಲಿ ಸಾಕಷ್ಟು ಅಕ್ರಮವಾಗಿರುವುದರಿಂದ ಪರಿಸರ ಹಾನಿ ಹಾಗೂ ಅದಿರು ನಷ್ಟವನ್ನು ಪತ್ತೆ ಮಾಡಿ, ನಷ್ಟವನ್ನು ಆಯಾ ಕಂಪನಿಯವರು ಭರಿಸುವ, ಅವರ ಮೂಲಕ ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ ಮಾಡುವುದರ ಬಗ್ಗೆ ಸರ್ಕಾರ ನಿರ್ಧರಿಸುವುದು ಅಥವಾ ಮ್ಯಾನಿಟರಿಂಗ್ ಕಮಿಟಿ ನಷ್ಟವನ್ನು ವಸೂಲಿ ಮಾಡಿ, ಆರ್ ಆಂಡ್ ಆರ್ ಯೋಜನೆ ಅನುಷ್ಠಾನಕ್ಕೆ ಮುಂದಾಗಲು ಸಾಧ್ಯವಾಗುತ್ತದೆ. ಆದರೆ ಗುತ್ತಿಗೆಯನ್ನು ಅವರಿಗೆ ನೀಡದೆ, ಜಾಗತಿಕ ಟೆಂಡರ್ ಮೂಲಕ ಹರಾಜು ಮಾಡಲಿದೆ.
ಏಕಕಾಲದಲ್ಲಿ ಸಿದ್ಧತೆ: ಏಕಕಾಲದಲ್ಲಿ ಸಿ ಕೆಟಗರಿಯ ಗಣಿ ಗುತ್ತಿಗೆ ಪ್ರದೇಶದಲ್ಲಿರುವ ಅದಿರು ಪ್ರಮಾಣ, ಅದಿರು ನಷ್ಟವನ್ನು ಕಂಡು ಹಿಡಿಯುವುದು ಹಾಗೂ ಆರ್ ಅಂಡ್ ಆರ್ ಯೋಜನೆ ಸಿದ್ಧತೆ ನಡೆಸಲಾಗುತ್ತಿದೆ. ಸುರತ್ಕಲ್ನ ಎನ್ಐಟಿಕೆ ಅದಿರು ಸಂಗ್ರಹ ಮಾಹಿತಿ ಕಲೆ ಹಾಕುತ್ತಿದ್ದರೆ, ಐಸಿಎಫ್ಆರ್ಇ ತಂಡ ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣಕ್ಕೆ ಯೋಜನೆ ಸಿದ್ಧಮಾಡುತ್ತಿದೆ. ಈಗ ಲಾಸ್ ಅಸೆಸ್ಮೆಂಟ್ ಕಮಿಟಿ ಅಧೀನದ ರಿಮೋಟ್ ಸೆನ್ಸಿಂಗ್ ಏಜೆನ್ಸಿಯ ಸಲೀಂ ಎಂಬುವರ ನೇತೃತ್ವದಲ್ಲಿ 15 ಜನರ ತಂಡ ಬಳ್ಳಾರಿಗೆ ಗುರುವಾರದೊಳಗೆ ಆಗಮಿಸಿ, ಸಿ ಕೆಟಗರಿಯಲ್ಲಿ ಅದಿರು ನಷ್ಟದ ಪ್ರಮಾಣವನ್ನು ಪತ್ತೆ ಹಚ್ಚಲಿದೆ. ಒಂದು ತಿಂಗಳ ಕಾಲ ಜಿಲ್ಲೆಯಲ್ಲಿ ಬಿಡಾರ ಹೂಡುವ ಸಾಧ್ಯತೆ ಇದೆ.
ಸಿ ಕೆಟಗರಿಯಲ್ಲಿರುವ ರಾಜ್ಯದ 51 ಕಂಪನಿಗಳ ಗಣಿ ಗುತ್ತಿಗೆ ಪ್ರದೇಶವನ್ನು ಜಾಗತಿಕ ಟೆಂಡರ್ ಹಾಕುವುದರಿಂದ ಸಾಕಷ್ಟು ಪ್ರಮಾಣದ ಆದಾಯ ಸರ್ಕಾರಕ್ಕೆ ಹರಿದು ಬರಲಿದೆ. ಅಕ್ರಮದಿಂದ ಆಗಿರುವ ನಷ್ಟವನ್ನು ಪರಿಸರ ಪುನರುಜ್ಜೀವನ ಮತ್ತು ಪುನರ್ ನಿರ್ಮಾಣ ಯೋಜನೆ ಸಿದ್ಧಗೊಳಿಸಿ, ಆಯಾ ಗಣಿ ಕಂಪನಿಗಳಿಂದ ಭರಿಸುವ ಕೆಲಸ ಆಗುತ್ತಿದೆ. ಜತೆಗೇ ಸಿ ಕೆಟಗರಿ ಗಣಿ ಕಂಪನಿಗಳ ಗಣಿ ಗುತ್ತಿಗೆ ಪ್ರದೇಶಗಳನ್ನು ಜಾಗತಿಕ ಟೆಂಡರ್ ಮೂಲಕ ಹರಾಜು ಮಾಡುವ ಸಿದ್ಧತೆಯೂ ಭರದಿಂದ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement