ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಂಡವಾಳಶಾಹಿಗಳಿಂದ ದೇಶದ ಭವಿಷ್ಯ ಹಾಳು

Rashmi Kasaragodu
Updated On : 4 May 2014, 12:48 pm

ಹೂವಿನಹಡಗಲಿ:  ಬಂಡವಾಳಶಾಹಿಗಳು ಹಾಗೂ ಮತೀಯ ಶಕ್ತಿಗಳಿಂದ ದೇಶದ ಭವಿಷ್ಯ ಅಧೋಗತಿಯತ್ತ ಸಾಗಿದೆ. ಇದರಿಂದ ಕಾರ್ಮಿಕ ವರ್ಗ ರಾಜಕೀಯವಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗುವ ಅಗತ್ಯವಿದೆ ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್.ಎಂ. ಇಸ್ಮಾಯಿಲ್ ಹೇಳಿದರು. ಅವರು ಇಲ್ಲಿನ ಸಾರಿಗೆ ಘಟಕದ ಕಾರ್ಮಿಕರು ಆಯೋಜಿಸಿದ್ದ 129ನೇ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ಎಐಟಿಯುಸಿ ತಾಲೂಕು ಅಧ್ಯಕ್ಷ ಎಚ್. ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಎಚ್.ಎ. ಆದಿಮೂರ್ತಿ, ಘಟಕ ವ್ಯವಸ್ಥಾಪಕ ಪ್ರಕಾಶ್ ದೊಡ್ಡಮನಿ, ಸಾರಿಗೆ ಸಂಘಟನೆ ಮುಖಂಡ ಜಿ.ಎಚ್. ರೆಡ್ಡಿ, ಮತ್ತಿಹಳ್ಳಿ ಬಸವರಾಜ ಇತರರಿದ್ದರು.

ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಿ: ಸ್ವಾಮೀಜಿ


ಸಿರುಗುಪ್ಪ:  ಶೋಷಿತ ಮಡಿವಾಳ ಸಮಾಜವು ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಮಾಜವನ್ನು ಹಿಂದುಳಿದ ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಚಿತ್ರದುರ್ಗ ಗುರುಪೀಠದ ಬಸವ ಮಾಚಿದೇವಾ ಸ್ವಾಮೀಜಿ ಒತ್ತಾಯಿಸಿದರು. ಅವರು ತಾಲೂಕು ಮಡಿವಾಳ ಸಮಾಜ ಹಾಗೂ ಮಡಿವಾಳ ಮಾಚಿದೇವ ದೇವಸ್ಥಾನ ಮಂಡಳಿ ವತಿಯಿಂದ ಪಟ್ಟಣದಲ್ಲಿ ಮಾಚಿದೇವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಬಸವ ಭೂಷಣ ಸ್ವಾಮೀಜಿ, ಮುಖಂಡ ಎಂ. ಪರಮೇಶಪ್ಪ, ಎಂ. ಮರಿಸ್ವಾಮಿ, ಗೋಪಿ, ಮಲ್ಲಯ್ಯ,  ನರಸಣ್ಣ, ಈಶ್ವರಪ್ಪ ಉಪಸ್ಥಿತರಿದ್ದರು. ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಹಾಗೂ ಶ್ರೀ ಬಸವ ಮಾಚಿದೇವ ಶ್ರೀಗಳ ಗುರುಪೀಠ ಚಿತ್ರದುರ್ಗ ಬಸವಭೂಷಣ ಶ್ರೀಗಳನ್ನು ಮೆರವಣಿಗೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement