ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಾಮೂಹಿಕ ವಿವಾಹದಿಂದ ಮಿತವ್ಯಯ

Rashmi Kasaragodu
Updated On : 4 May 2014, 12:51 pm

ಹೂವಿನಹಡಗಲಿ: ಸಾಮೂಹಿಕ ವಿವಾಹಗಳನ್ನು ಆಯೋಜಿಸಿರುವುದರಿಂದ ಸಾವಿರಾರು ಬಡ ಕುಟುಂಬಗಳ ಆರ್ಥಿಕ ವೆಚ್ಚ ಕಡಿಮೆಯಾಗಿದ್ದು, ಎಲ್ಲರೂ ಇದರ ಉಪಯೋಗ ಪಡೆಯುವಂತಾಗಲಿ ಎಂದು ಅಂಗೂರು ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯ ಶ್ರೀ ಹೇಳಿದರು.
 ಅವರು ತಾಲೂಕಿನ ಸುಕ್ಷೇತ್ರ ಮಾಗಳ ಗ್ರಾಮದಲ್ಲಿ ಶುಕ್ರವಾರ 33ನೇ ವರ್ಷದ ಶ್ರೀ ಗೋಣಿ ಬಸವೇಶ್ವರ ಜಾತ್ರೋತ್ಸವ ಹಾಗೂ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ, ಕುಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗ್ರಾಮಸ್ಥರು ಹೆಚ್ಚು ಹೆಚ್ಚು ದಾನ ನೀಡುವ ಮೂಲಕ ಉತ್ತಮ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಿ ಜೀವನದಲ್ಲಿ ಸಾರ್ಥಕತೆಯನ್ನು ಮೆರೆಯಬೇಕೆಂದು ಕರೆನೀಡಿದರು.
ಕಳೆದ 33 ವರ್ಷಗಳಿಂದ ನಿರಂತರವಾಗಿ ಬಸವ ಜಯಂತಿ ಹಾಗೂ ಶ್ರೀ ಗೋಣಿ ಬಸವೇಶ್ವರ ಜಾತ್ರೆ ಅಂಗವಾಗಿ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಲವು ಗ್ರಾಮಗಳ 45 ಜೊತೆ ನವ ದಂಪತಿಗಳು ಹೊಸ ಜೀವನಕ್ಕೆ ಕಾಲಿಟ್ಟರು.
ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ತಾಳಿ ವಿತರಿಸಿದರು. ಮುಖಂಡ ಅರವಳ್ಳಿ ವೀರಣ್ಣ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೋಹಿದ್ದೀನ್, ಜಿಪಂ ಸದಸ್ಯ ಜಿ. ವಸಂತ, ಗ್ರಾಪಂ ಅಧ್ಯಕ್ಷ ಎಚ್.ಬಸವರಾಜ, ಈಟಿ. ಕೋಟೆಪ್ಪ, ಬನ್ನಿಮಟ್ಟಿ ಭಗತ್ಸಿಂಗ್, ಎಚ್.ಎಂ.ಬಸವರಾಜಯ್ಯ ಉಪಸ್ಥಿತರಿದ್ಧರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement