ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಾಳೆ ಬಾಬಾ ರಾಮದೇವ್ ಪ್ರತಿಕೃತಿ ದಹನ

Rashmi Kasaragodu
Updated On : 6 May 2014, 12:51 pm

ಕಂಪ್ಲಿ: ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ಜನಶಕ್ತಿ ಜಂಟಿಯಾಗಿ ಮೇ 7ರ ಬೆಳಗ್ಗೆ 9 ಗಂಟೆಗೆ ಢೋಂಗಿ ಬಾಬಾ ರಾಮ್ದೇವ ವಿರುದ್ಧ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಅಲ್ಲಿಂದ ಮುಖ್ಯ ರಸ್ತೆ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಕೃತಿ ದಹನ ನಡೆಸಲಾಗುವುದು ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಅಧ್ಯಕ್ಷ ನೀಲಪ್ಪ ಪೇಂಟರ್ ತಿಳಿಸಿದ್ದಾರೆ. ರಾಮ್ದೇವ್ ವಿರುದ್ಧ 30 ನಿಮಿಷ ರಸ್ತೆ ತಡೆ ನಡೆಸಲಾಗುವುದು. ನಂತರ ಕಂಪ್ಲಿ ನಾಡ ತಹಸೀಲ್ದಾರ್ ಮೂಲಕ ರಾಮ್ದೇವ್ ವಿರುದ್ಧ ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ರವಾನಿಸಿ, ಒತ್ತಾಯಿಸಲಾಗುವುದು. ಪ್ರಗತಿಪರ ವಿಚಾರವಂತರು ಕಾರ್ಯಕ್ರಮವನ್ನು ಬೆಂಬಲಿಸಿ ಭಾಗವಹಿಸಬೇಕು ಎಂದು ಕರ್ನಾಟಕ ಜನಶಕ್ತಿಯ ಯರಿಸ್ವಾಮಿ ಕೊರವರ್, ಮುಖಂಡರಾದ ವಸಂತರಾಜ್ ಕಹಳೆ, ರಾಮಚಂದ್ರಪ್ಪ, ಶಾಂತಪ್ಪ ಪೂಜಾರಿ, ಮಂಜುನಾಥ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.


ಅಪಘಾತ: ಒಬ್ಬ ಸಾವು, ನಾಲ್ವರಿಗೆ ಗಾಯ



ಸಿರುಗುಪ್ಪ: ಕಾರು ಮತ್ತು ಎರಡು ದ್ವಿ ಚಕ್ರ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವನ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು, ನಾಲ್ವರಿಗೆ ತೀವ್ರ ಗಾಯಗಳಾದ ದಾರುಣ ಘಟನೆ ಪಟ್ಟಣದ ಸಿಂಧನೂರು ರಸ್ತೆಯಲ್ಲಿ ಬರುವ ನ್ಯೂ ಬಾಬಾ ಕಡ್ಲೆ ಮಿಲ್ ಸಮೀಪ ಭಾನುವಾರ ರಾತ್ರಿ ಜರುಗಿದೆ.
ಗಾಯಗೊಂಡವರನ್ನು ಕರ್ಚಿಗನೂರಿನ ವೀರೇಶಗೌಡ (28), ಕೆಂಗಲ್ ನಸೈಫುಲ್ (21), ಸುಭಾನ್ (23), ಸಿರುಗುಪ್ಪದ ಮೈಮುದ್ದೀನ್ (10) ಎಂದು ಗುರುತಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಬಳ್ಳಾರಿ ವಿಮ್ಸ್ಗೆ ಸಾಗಿಸಲಾಗಿದ್ದು, ಮುದೇಗೌಡ (55) ಎಂಬುವನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಮೃತ ಮುದೇಗೌಡ ಮತ್ತು ಅವರ ಮಗ ವೀರೇಶಗೌಡ ಇಬ್ಬರು ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಸಿರುಗುಪ್ಪದಿಂದ ಕರ್ಚಿಗನೂರಿಗೆ ಹೊರಟಿದ್ದರು.  ಅವರ ಪಕ್ಕದಲ್ಲಿ ಮತ್ತೊಂದು ಸೈಕಲ್ ಮೋಟರ್ನಲ್ಲಿ ಬರುತ್ತಿದ್ದ ಸೈಫುಲ್ಲಾ, ಸುಭಾನ್, ಮೈಮುದ್ದೀನ್ ಕಾರ್ಯಕ್ರಮಕ್ಕೆಂದು ಇಬ್ರಾಂಪುರಕ್ಕೆ ತೆರಳುವಾಗ ದಡೇಸೂಗೂರಿನಿಂದ ಸಿರುಗುಪ್ಪಕ್ಕೆ ಬರುತ್ತಿದ್ದ ಕಾರೊಂದು ಚಾಲಕನ ನಿರ್ಲಕ್ಷ್ಯದಿಂದಾಗಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಕಾರು ಚಾಲಕ ಪರಾರಿ ಆಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement