ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪಂಕ್ತಿಭೇದ ವಿರೋಧಿಸಿ ಪ್ರತಿಭಟನೆ

Rashmi Kasaragodu
Updated On : 6 May 2014, 12:52 pm

ಬಳ್ಳಾರಿ:  ಉಡುಪಿ ಕೃಷ್ಣ ಮಠಗಳಲ್ಲಿನ ಪಂಕ್ತಿ ಹಾಗೂ ಜಾತಿಭೇದ ಆಚರಣೆ ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಎಸ್. ಬಸವರಾಜ್ ಮಾತನಾಡಿ,  ದೇವಾಲಯ, ಮಠಗಳಲ್ಲಿ ನಡೆಯುವ ಭೋಜನ ಸೇರಿದಂತೆ ಎಲ್ಲ ಆಚರಣೆಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ.  ಮಠಗಳಲ್ಲಿ ಸಹಭೋಜನಕ್ಕೆ ಕುಳಿತುಕೊಳ್ಳುವ ವೇಳೆ ಜನರು ತಮ್ಮ ಮೇಲಂಗಿಗಳನ್ನು ತೆಗೆಯಬೇಕಿದ್ದು, ಜತೆಗೆ ಮುಂಜಿ, ಸಂಧ್ಯಾವಂದನೆ ಎಂಬ ಇತ್ಯಾದಿ ಪ್ರಶ್ನೆಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಜನರನ್ನು ವಿಂಗಡಿಸುವ ಹುನ್ನಾರವಾಗಿದೆ. ಒಂದು ವೇಳೆ ಗೊತ್ತಿಲ್ಲದೇ, ಬ್ರಾಹ್ಮಣರ ಪಂಕ್ತಿಯಲ್ಲಿ ಊಟಕ್ಕೆ ಕುಳಿತರೆ ಮಧ್ಯದಲ್ಲೇ ಎಬ್ಬಿಸಿ ಹೊರದಬ್ಬುವ ಅಮಾನವೀಯ ವರ್ತನೆ ನಿತ್ಯ ನಡೆಯುತ್ತಿದೆ. ಈಚೆಗೆ ಉಡುಪಿ ಮಠದಲ್ಲಿ ಮಹಿಳೆಯೊಬ್ಬರು ಅನುಭವಿಸಿದ ಅಮಾನವೀಯ ಘಟನೆಯೇ ತಾಜಾ ಉದಾಹರಣೆಯಾಗಿದೆ ಎಂದರು.
ಬ್ರಾಹ್ಮಣ-ಬ್ರಾಹ್ಮಣೇತರ, ದಲಿತರ ನಡುವೆ ಪಂಕ್ತಿಭೇದ ವ್ಯವಸ್ಥೆ ಇನ್ನಷ್ಟು ಭಿನ್ನವಾಗಿದೆ. ಮನುಷ್ಯ-ಮನುಷ್ಯರ ನಡುವೆ ಭೇದವೆಣಿಸುವ ಕ್ರೂರ ಜಾತಿ ಪದ್ಧತಿಯಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವಿ.ಎಸ್. ಶಿವಶಂಕರ್, ಎಚ್.ತಿಪ್ಪಯ್ಯ, ರಂಗಪ್ಪದಾಸರ್, ಭಾಸ್ಕರರೆಡ್ಡಿ, ಜಗನ್ನಾಥ್, ಬಿ. ಅಡಿವೆಪ್ಪ, ಗಾದಿಲಿಂಗಪ್ಪ, ಕರುಣಾನಿಧಿ, ಹುಳ್ಳಿ ಉಮೇಶ್, ವಿಶ್ವನಾಥಸ್ವಾಮಿ, ಗಾಳಿ ಬಸವರಾಜ್, ಕೋಟಗಿ ಮಲ್ಲಿಕಾರ್ಜುನ, ದುರ್ಗಪ್ಪ, ಕುಮಾರ್, ನೀಲಪ್ಪ, ಓಬಳೇಶಪ್ಪ, ಬೆಲ್ಲದ ಈರಣ್ಣ, ಚಂದ್ರಕುಮಾರಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement