ಬಾಬಾ ರಾಮ್ದೇವ್ ಪ್ರತಿಕೃತಿ ದಹನ
ಕಂಪ್ಲಿ: ದಲಿತರ ಬಗ್ಗೆ ತುಚ್ಛವಾಗಿ ಮಾತನಾಡಿದ ಬಾಬಾ ರಾಮ್ದೇವ್ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಕರ್ನಾಟಕ ಜನಶಕ್ತಿ ಮತ್ತು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಹಾಗೂ ಇನ್ನಿತರೆ ದಲಿತ ಪರ ಸಂಘಟನೆಗಳು ಬುಧವಾರ ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ರಾಮ್ದೇವ್ ಪ್ರತಿಕೃತಿ ದಹಿಸಿದರು.
ಇದಕ್ಕೂ ಮುನ್ನ ಸಂಘಟಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಾಬಾ ರಾಮ್ದೇವ್ ವಿರುದ್ಧ ದೂರು ದಾಖಲಿಸಲು ಮನವಿ ಪತ್ರ ಸಲ್ಲಿಸಿದರು. ನಂತರ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶ ಗೊಳಿಸಿ, ಬಾಬಾ ರಾಮ್ದೇವ್ ವಿರುದ್ಧ ಘೋಷಣೆ ಕೂಗಿದರು. ನಾಡ ತಹಸೀಲ್ದಾರ್ ಕೆ. ಬಾಲಪ್ಪ ಇವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪಿಎಸ್ಐ ಡಿ. ಹುಲುಗಪ್ಪ ಇದ್ದರು. ನಂತರ ಬಾಬಾ ರಾಮ್ದೇವ್ ಪ್ರತಿಕೃತಿ ದಹನ ಮಾಡಿದರು.
ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಸಂಸ್ಥಾಪನಾ ಅಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ, ದಲಿತರನ್ನು ಅವಹೇಳನ ಮಾಡಿದ ಕಪಟಸ್ವಾಮಿ ರಾಮದೇವನನ್ನು ಬಂಧಿಸಬೇಕು. ಬಾಬಾ ರಾಮ್ದೇವ್ ವಿರುದ್ಧ ಕಾನೂನು ಚೌಕಟ್ಟಿನಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿ ಸದಸ್ಯ ವಸಂತರಾಜ ಕಹಳೆ, ಕಂಪ್ಲಿ ಘಟಕ ಅಧ್ಯಕ್ಷ ಯರಿಸ್ವಾಮಿ ಕೊರವರ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಕಂಪ್ಲಿ ಘಟಕ ಅಧ್ಯಕ್ಷ ಕೆ. ನೀಲಪ್ಪ ಪೇಂಟರ್, ಅಂಬೇಡ್ಕರ್ ಸಂಘ ಅಧ್ಯಕ್ಷ ಹುಲುಗಪ್ಪ, ಮುಖಂಡರಾದ ಶಾಂತಪ್ಪ ಪೂಜಾರಿ, ಉಮೇಶ್ ಗುಡಿಮನಿ, ಕಾಳಿಂಗವರ್ಧನ, ರಾಜವಲಿ, ರಾಮಚಂದ್ರ ಬಳ್ಳಾರಿ, ಮಂಜು, ಹನುಮಂತಪ್ಪ ಏಳುಬೆಂಚಿ, ಎಸ್.ಸಿ. ಶ್ರೀನಿವಾಸ, ಮಸ್ತಾನಪ್ಪ, ವೆಂಕಟೇಶ, ಸುಂಕಪ್ಪ, ನರಸಿಂಹರೆಡ್ಡಿ, ಗಂಗಪ್ಪ, ಫ್ರಾನ್ಸಿಸ್, ರಾಜಪ್ಪ ಗುಡಿಮನಿ, ಹುಸೇನಪ್ಪ, ಟಿ. ರಾಮಾಂಜಿನಿ, ಹೊನ್ನೂರಪ್ಪ, ಲೈಟಿಂಗ್ ಹುಲುಗಪ್ಪ, ದುರುಗಪ್ಪ, ಗೋಪಿ, ಶರಣಪ್ಪ, ಹುಲುಗಪ್ಪ ವಕೀಲ, ಬಸಪ್ಪ ಕೆಂಗೇರಿ, ಕೆ.ಎನ್. ಲೋಕೇಶ್, ರಾಮಕೃಷ್ಣ, ಲಕ್ಷ್ಮಣ, ನೀಲಪ್ಪ ಕರಡಿ, ಮಲ್ಲಿಕಾರ್ಜುನ.ಎಸ್.ಎಂ., ನಾರಾಯಣ ಎಸ್. ಹುಸೇನ್, ರಾಮು, ಶಿವಕುಮಾರ್, ಗಂಗಾ, ಎಚ್. ಮಲ್ಲಿ, ಹನುಮೇಶ, ಕೆ. ಸುರೇಶ ಪಾಲ್ಗೊಂಡಿದ್ದರು.