ನಾಳೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ
ಬಳ್ಳಾರಿ: ತಾಲೂಕಿನ ಓರ್ವಾಯಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮೇ 10ರಂದು ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಗ್ರಾಮದ ಸಕಲ ಸದ್ಭಕ್ತ ಮಂಡಳಿ ಹಮ್ಮಿಕೊಂಡಿದೆ
ಅಂದು ಬೆಳಗ್ಗೆ 8ಕ್ಕೆ ಗ್ರಾಮದ ಅಗಸೆ ಬಳಿಯ ಬಾವಿಯಿಂದ ಗಂಗಾಪೂಜೆ ಮೂಲಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರದ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಸಕಲ ವಾದ್ಯಗಳೊಂದಿಗೆ ನಡೆಸಲಿದ್ದು, ಬೆಳಗ್ಗೆ 10ಕ್ಕೆ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವನ್ನು ವಹಿಸಲಿದ್ದು, ಆಂಧ್ರದ ಕೊಕ್ಕರಚೇಡು ಗ್ರಾಮದ ಶ್ರೀ ಶಂಕರಾನಂದ ಗಿರಿ ಗುರುಸೇವಾ ಆಶ್ರಮದ ಮಾತಾಜಿ ಶಿವಶರಣಮ್ಮ ಅವರು ಹೇಮರೆಡ್ಡಿ ಮಲ್ಲಮ್ಮ ವಿಷಯ ಕುರಿತು ಉಪನ್ಯಾಸ ನೀಡುವರು. ನಂತರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದು ಓರುವಾಯಿ ಗ್ರಾಮದ ಸಕಲ ಸದ್ಭಕ್ತ ಮಂಡಳಿಯ ಪ್ರಕಟಣೆ ತಿಳಿಸಿದೆ.