ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಗರಿಬೊಮ್ಮನಹಳ್ಳಿ: ಹದವಾದ ಮಳೆ

Mainashree
Updated On : 9 May 2014, 10:21 am

ಹಗರಿಬೊಮ್ಮನಹಳ್ಳಿ:  ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಗುರುವಾರ ಸಂಜೆ ಹದವಾದ ಮಳೆ ಸುರಿಯಿತು.
ಮಧ್ಯಾಹ್ನ ಎರಡು ಗಂಟೆಯಿಂದಲೇ ಮೋಡಕವಿದ ವಾತಾವರಣವಿತ್ತು. ಹೀಗಾಗಿ ಪಟ್ಟಣದಲ್ಲಿ ಬಿಸಿಲಿನ ಝಳದ ಬದಲಿಗೆ ತಂಪು ವಾತಾವರಣ ಎಲ್ಲೆಡೆ ಆವರಿಸಿತ್ತು. ಇಲ್ಲಿಯತನಕ ಬಿರುಗಾಳಿ, ಸಿಡಿಲಿನ ಅರ್ಭಟದ್ದೆ ಕಾರುಬಾರು ಆದರೆ, ಗುರುವಾರ ಮಾತ್ರ ಕೇವಲ ಮಳೆ ಸುರಿಯಿತು. ಆಗೊಮ್ಮೆ, ಈಗೊಮ್ಮೆ ಗುಡುಗಿನ ಸದ್ದು ಕೇಳಿದ್ದು ಬಿಟ್ಟರೆ ಹೆಚ್ಚುಕಡಿಮೆ ಮಳೆ ಚೆನ್ನಾಗಿಯೇ ಸುರಿಯಿತು.
ಮೊದಲ ಬಾರಿಗೆ ಜೋರಾದ ಮಳೆ ಸುರಿದಿದ್ದರಿಂದ ರಸ್ತೆಯ ಮೇಲೆ ಧಾರಾಕಾರವಾಗಿ ನೀರು ಹರಿಯಿತು. ಇತ್ತ ಚರಂಡಿಗಳು ಭರ್ತಿಯಾಗಿ ಹರಿದವು. ಪಟ್ಟಣದ ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದರಿಂದ ಮಳೆಯ ನೀರು ಚರಂಡಿ ಮೇಲೆ ಹರಿಯುವ ಬದಲು ರಸ್ತೆಯ ಮೇಲೆ ಹರಿಯಿತು. ಕೆಲವು ಕಡೆಗಳಲ್ಲಿ ಸಾರ್ವಜನಿಕರು ಚರಂಡಿಯನ್ನು ಸ್ವಚ್ಛಗೊಳಿಸಿ ಮಳೆ ನೀರು ಸಾರಾಗವಾಗಿ ಹರಿದುಹೋಗುವಂತೆ ಮಾಡಿದರು.
ಪಟ್ಟಣದ ಹಲವು ಕಡೆಗಳಲ್ಲಿ ಮಕ್ಕಳು ಕೊಡೆಗಳನ್ನು ಹಿಡಿದುಕೊಂಡು ಮಳೆಯಲ್ಲಿಯೇ ಚಿನ್ನಾಟವಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement