ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪಾಠದಲ್ಲಿರುವ ಶ್ರದ್ಧೆಯೇ ಸಾಧನೆಗೆ ಕಾರಣ

Mainashree
Updated On : 13 May 2014, 9:52 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 12
ಹುಮ್ಮಸ್ಸು, ಛಲ, ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಬಳ್ಳಾರಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆರ್. ಅನುರಾಧಾ ಅವರೇ ಸಾಕ್ಷಿ.
ಸ್ಥಳೀಯ ಬಾಲಭಾರತಿ ವಿವೇಕಾನಂದ ಪ್ರೌಢಶಾಲೆ ವಿದ್ಯಾರ್ಥಿನಿ ಆರ್. ಅನುರಾಧಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 618 ಅಂಕ (ಶೇ. 98.88) ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಟ್ಯೂಷನ್‌ಗೂ ಹೋಗದೆ ಶಾಲೆಯಲ್ಲಿ ಹೇಳಿಕೊಟ್ಟ ಪಾಠವನ್ನೇ ಶ್ರದ್ಧೆಯಿಂದ ಕಲಿತು ಈ ಸಾಧನೆ ಮಾಡಿದ್ದಾರೆ.
ಸಮಾಜಶಾಸ್ತ್ರದಲ್ಲಿ 100 ಅಂಕ, ಕನ್ನಡ 123, ಹಿಂದಿ 99, ಗಣಿತ 99, ವಿಜ್ಞಾನ 98, ಇಂಗ್ಲಿಷ್ 90 ಅಂಕ ಪಡೆದಿದ್ದಾರೆ. ಈಕೆಯ ತಂದೆ ಡಾ೤ ಎಂ.ಎನ್. ರಮಾಕಾಂತ್ ಹುಬ್ಬಳ್ಳಿಯ ನೈಋುತ್ಯ ರೇಲ್ವೆ ವಿಭಾಗದಲ್ಲಿ ವೈದ್ಯಕೀಯ ಮುಖ್ಯ ಅಧೀಕ್ಷಕರಾಗಿದ್ದು, ತಾಯಿ ರಮಾ ಖಾಸಗಿ ಶಾಲೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದಂಪತಿಯ ಏಕೈಕ ಪುತ್ರಿ ಆರ್. ಅನುರಾಧಾ. ಎಸ್ಸೆಸ್ಸೆಲ್ಸಿ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟವಾಗುತ್ತಿದ್ದಂತೆ ವಿಷಯ ತಿಳಿದ ಬಂಧುಗಳು, ಮಿತ್ರರು ಕರೆಮಾಡಿ ಶುಭಾಶಯ ತಿಳಿಸಿದರು.
ಸಾಧನೆ ಖುಷಿ ತಂದಿದೆ: ನಮ್ಮ ಮಗಳ ಈ ಸಾಧನೆ ತುಂಬಾ ಖುಷಿ ತಂದಿದೆ. ಇದೇ ರೀತಿ ಓದು ಎಂದು ಯಾವುದೇ ರೀತಿ ಒತ್ತಡ ಹಾಕುತ್ತಿರಲಿಲ್ಲ. ಆದರೆ ಅವಳ ಓದಿನಲ್ಲಿ ಶ್ರದ್ಧೆ, ಆಸಕ್ತಿ ವಹಿಸಿ ಅಭ್ಯಾಸ ಮಾಡಿರುವುದು ಹೆಚ್ಚು ಅಂಕ ಪಡೆಯಲು ಕಾರಣ ಎಂದು ತಾಯಿ ರಮಾ ಹೇಳಿದರು.

ವೈ.ಎಂ. ಸಿದ್ದಲಿಂಗಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement