ಉಜ್ಜಿನಿ ಗ್ರಾಪಂ: ಬೆಳ್ಳಕಟ್ಟಿ ಕೊಟ್ರೇಶ್ ಅಧ್ಯಕ್ಷ
ಕೊಟ್ಟೂರು: ಸಮೀಪದ ಉಜ್ಜಿನಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬೆಳ್ಳಕಟ್ಟಿ ಕೊಟ್ರೇಶ್, ಉಪಾಧ್ಯಕ್ಷರಾಗಿ ಲಲಿತಮ್ಮ ಹೊನ್ನೂರಪ್ಪ ಅವಿರೋಧ ಆಯ್ಕೆಯಾದರು. ಉಜ್ಜಯಿನಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಹೊರತುಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣಕ್ಕಾಗಿ ಇವರ ಆಯ್ಕೆಯನ್ನು ಅಧಿಕೃತವಾಗಿ ಚುನಾವಣಾಧಿಕಾರಿ ಘೋಷಿಸಿದರು. ಮುಖಂಡರಾದ ವಿ. ಲೋಕೇಶ್, ಕಜ್ಜೇರ್ ಅಂಜಿನಪ್ಪ, ಎಂ. ನಾಗರಾಜ್, ಬೇವೂರು ವೆಂಕಟೇಶ್, ನಾಗರಕಟ್ಟಿ ಕೊಟ್ರೇಶಪ್ಪ, ಜಿ. ಸಿದ್ದೇಶ್, ಬೆಳ್ಳಕಟ್ಟಿ ಸುರೇಶ್, ವೀರಪ್ಪಯ್ಯ, ಗೊಂಗಡಿ ವೀರಯ್ಯ, ವೀರಣ್ಣ, ಅಳವರ ಮರುಳಸಿದ್ದಪ್ಪ ಮತ್ತು ಸದಸ್ಯರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.