ಶಂಕಿತ ಡೆಂಘೀ: ಬಾಲಕ ಅಸ್ವಸ್ಥ
ಬಳ್ಳಾರಿ: ತಾಲೂಕಿನ ಕೃಷ್ಣಾನಗರದ ವರ್ಷದ ಬಾಲಕನಿಗೆ ಶಂಕಿತ ಡೆಂಘೀ ಜ್ವರದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ಗೆ ದಾಖಲಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಬಾಲಕನ ತಾಯಿ ಉಮಾದೇವಿ ಡೆಂಘೀ ಜ್ವರದಿಂದ ಬಳಲಿ ಜಿಂದಾಲ್ನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದರು. ಶಂಕಿತ ಡೆಂಘೀ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಗಾಗಲೇ ಕೃಷ್ಣಾನಗರ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.