ಹೂವಿನಹಡಗಲಿ: ಶೇ. 86.30 ಫಲಿತಾಂಶ
ಹೂವಿನಹಡಗಲಿ: 2013-14ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ. 86.30ರಷ್ಟು ಫಲಿತಾಂಶ ಲಭಿಸಿದೆ. 2212 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 1909 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೊಟ್ರೇಶ ತಿಳಿಸಿದ್ದಾರೆ.
2013-14ನೇ ಸಾಲಿನಲ್ಲಿ ತಾಲೂಕಿನಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದ ಮೀರಾಕೊರನಹಳ್ಳಿ, ಉಪನಾಯಕನಹಳ್ಳಿ, ಆಂಗ್ಲ ಮಾಧ್ಯಮ ಶಾಲೆ ಹೊಳಲು, ಡಿವೈನ್ ಹಿರೇಹಡಗಲಿ, ಮೊರಾರ್ಜಿ ಶಾಲೆ ನವೋದಯ ಮದಲಗಟ್ಟಿ, ಇಟ್ಟಿಗಿ, ಗಿರಿಯಾಪುರ, ವರಕನಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ಶಾಲೆ 8 ಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ.
ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದ ಮ.ಮ. ಪಾಲೀಟ್ ಆಂಗ್ಲ ಮಾಧ್ಯಮ ಶಾಲೆಯ ಬಿ. ಆದರ್ಶ ಶೇ. 96.48ರಷ್ಟು ಫಲಿತಾಂಶ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾನೆ.
ಸಪಪೂ ಕಾಲೇಜು ಬಾಲಕರ ಹೂವಿನಹಡಗಲಿ- ಶೇ. 68.14, ಸಪಪೂ ಕಾಲೇಜು ಬಾಲಕಿಯರ ಹೂವಿನಹಡಗಲಿ- ಶೇ. 75.16, ಸಪಪೂ ಕಾಲೇಜು ಹಿರೇಹಡಗಲಿ- ಶೇ. 92.11, ಸಪಪೂ ಕಾಲೇಜು ಹೊಳಲು-ಶೇ. 90.15, ಸಪಪೂ ಕಾಲೇಜು ಮಾಗಳ- ಶೇ. 77.36, ಸಪಪೂ ಕಾಲೇಜು ಸೋಗಿ ಶೇ. 84.29, ಸಪಪೂ ಕಾಲೇಜು ನಾಗತಿ ಬಸಾಪುರ- ಶೇ. 86.15, ಸಪಪೂ ಕಾಲೇಜು ಉತ್ತಂಗಿ- ಶೇ. 80, ಸಪ್ರೌ ಶಾಲೆ ಮಾನ್ಯರ ಮಸಲವಾಡ ಶೇ. 92.68, ಸಪ್ರೌ ಶಾಲೆ ಬೂದನೂರು ಶೇ. 89.74, ಸಪ್ರೌ ಶಾಲೆ ಹಿರೇಮಲ್ಲಿನಕೇರಿ ಶೇ. 90.91, ಸಪ್ರೌ ಶಾಲೆ ಪಶ್ಚಿಮ ಕಾಲ್ವಿ ಶೇ. 98.46, ಸಪ್ರೌ ಶಾಲೆ ಇಟ್ಟಿಗಿ ಶೇ. 64.63, ಸಪ್ರೌ ಶಾಲೆ ಮಹಾಜನದಹಳ್ಳಿ ಶೇ. 75, ಸಪ್ರೌ ಶಾಲೆ ನಂದಿಹಳ್ಳಿ ಶೇ. 94.87, ಸಪ್ರೌ ಶಾಲೆ ಅಡವಿ ಮಲ್ಲನಕೇರಿ ಶೇ. 75.68, ಸಪ್ರೌ ಶಾಲೆ ಹ್ಯಾರಡ ಶೇ. 98.41, ಸಪ್ರೌ ಶಾಲೆ ಮೈಲಾರ ಶೇ. 79.59, ಸಪ್ರೌ ಶಾಲೆ ಹಿರೇಬನ್ನಿಮಟ್ಟಿ ಶೇ. 94.74, ಸಪ್ರೌ ಶಾಲೆ ಹಿರೇಕೊಳಚಿ ಶೇ. 95.65, ಸಪ್ರೌ ಶಾಲೆ ಬ್ಯಾಲಹುಣ್ಸಿ ಶೇ. 92.31, ಸಪ್ರೌ ಶಾಲೆ ಹರವಿ ಶೇ. 73.53, ಸಪ್ರೌ ಶಾಲೆ ಎಲ್.ಎನ್. ಪ್ಲಾಟ್ ಶೇ. 95.45 ಫಲಿತಾಂಶ ಪಡೆದಿವೆ.
ಅನುದಾನಿತ ಪ್ರೌಢ ಶಾಲೆಗಳು: ಸಿಸಿ ಪ್ರೌ ಶಾಲೆ ಹಿರೇಕುರುವತ್ತಿ ಶೇ. 88.88, ಕೆಎನ್‌ಎಸ್‌ಸಿ ಪ್ರೌ ಶಾಲೆ ಇಟ್ಟಿಗಿ ಶೇ. 77.77, ಜಿಎಚ್‌ಎನ್ ಪ್ರೌ ಶಾಲೆ ಕೊಮಾರನಹಳ್ಳಿ ಶೇ. 89.65, ಅಮಪಶಂಲಿಂಗ ಪ್ರೌ ಶಾಲೆ ಹೊಳಗುಂದಿ ಶೇ. 72.97, ಎಂಎಂಜಿ ಪ್ರೌ ಶಾಲೆ ಸೋವೇನಹಳ್ಳಿ ಪ್ರೌ ಶಾಲೆ ಶೇ. 85.41, ಕೆವಿಎಚ್ ಕಾತೇಬೆನ್ನೂರು ಶೇ. 91.89 ಫಲಿತಾಂಶ ಪಡೆದಿವೆ.
ಅನುದಾನರಹಿತ ಪ್ರೌಢ ಶಾಲೆಗಳು: ಎಂಎಂ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆ ಹೂವಿನಹಡಗಲಿ ಶೇ. 93.33, ತುಂಗಭದ್ರಾ ಪ್ರೌ ಶಾಲೆ ಹೂವಿನಹಡಗಲಿ ಶೇ. 93.33, ಜ್ಞಾನಗಂಗಾ ಪ್ರೌ ಶಾಲೆ ಹೂವಿನಹಡಗಲಿ ಶೇ. 69.56, ವಿದ್ಯಾಂಜಲಿ ಪ್ರೌ ಶಾಲೆ ಹೂವಿನಹಡಗಲಿ ಶೇ. 97.43, ಹಿರೇಮಠ ಪ್ರೌ ಶಾಲೆ ಹೊಳಲು ಶೇ. 66.66 ಫಲಿತಾಂಶ ಪಡೆದಿವೆ.
ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ಹೂವಿನಹಡಗಲಿ ಶೇ. 97.61 ಫಲಿತಾಂಶ ಪಡೆದಿವೆ. ತಾಲೂಕಿನಲ್ಲಿ ಪರೀಕ್ಷೆಗೆ ಕುಳಿತ 1163 ಬಾಲಕರು, 1049 ಬಾಲಕಿಯರು ಸೇರಿ ಒಟ್ಟು 2212 ವಿದ್ಯಾರ್ಥಿಗಳಲ್ಲಿ 1909 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆಂದು ಮಾಹಿತಿ ನೀಡಿದರು.