ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿಗೆ ರಾಷ್ಟ್ರಪತಿ ಪ್ರಶಸ್ತಿ

Rashmi Kasaragodu
Updated On : 15 May 2014, 12:28 pm

ಬಳ್ಳಾರಿ: ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ 2013-14ನೇ ಸಾಲಿನಲ್ಲಿ 104.70 ಕೋಟಿ ನಿವ್ವಳ ಲಾಭ ಗಳಿಸಿದೆ. 1.72 ಲಕ್ಷ ರೂಪೇ ಎಟಿಎಂ ಕಾರ್ಡ್ ವಿತರಿಸಿದ ದೇಶದ ಪ್ರಥಮ ಗ್ರಾಮೀಣ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಜಿ. ಭಟ್ ತಿಳಿಸಿದರು.
ಬುಧವಾರ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2012-13ನೇ ಸಾಲಿನಲ್ಲಿ 78.93 ಕೋಟಿ ನಿವ್ವಳ ಲಾಭ ಪಡೆದಿದ್ದ ಬ್ಯಾಂಕ್, ಈ ಬಾರಿ ಅದನ್ನು ಶೇ. 32.65ರಷ್ಟು ಹೆಚ್ಚಿಸಿಕೊಂಡಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಬ್ಯಾಂಕ್ 602 ಶಾಖೆಗಳನ್ನು ಹೊಂದಿದೆ. ಕಳೆದ ವರ್ಷ 13,975 ಕೋಟಿ ವ್ಯವಹಾರ ಹೊಂದಿದ್ದ ಬ್ಯಾಂಕ್ ಈ ಬಾರಿ 16,697 ಕೋಟಿ ಮೀರಿದ್ದು, ಶೇ.19.63ರಷ್ಟು ಬೆಳವಣಿಗೆ ಸಾಧಿಸಿದೆ. ಬ್ಯಾಂಕಿನಲ್ಲಿ ಒಟ್ಟು 53 ಲಕ್ಷ ಗ್ರಾಹಕರಿದ್ದಾರೆ ಎಂದರು.
ಕೃಷ್ಣಾ ಪ್ರಗತಿ ಗ್ರಾಮೀಣ ಬ್ಯಾಂಕ್ 1.72 ಲಕ್ಷ ರೂಪೇ ಎಟಿಎಂ ಕಾರ್ಡ್ ವಿತರಣೆ ಮಾಡಿದ ದೇಶದಲ್ಲಿ ಪ್ರಥಮ ಗ್ರಾಮೀಣ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆ ಪರಿಗಣಿಸಿ, ರಾಷ್ಟ್ರಪತಿಗಳು ಬ್ಯಾಂಕ್ಗೆ ಪ್ರಶಸ್ತಿ ನೀಡಿದ್ದಾರೆ. ಒಟ್ಟು ಠೇವಣಿಯಲ್ಲಿ 8,711 ಕೋಟಿ ವೃದ್ಧಿಯಾಗಿದ್ದು, ಶೇ.19.79ರಷ್ಟು ಪ್ರಗತಿಯಾಗಿದೆ. ಚಾಲ್ತಿ ಮತ್ತು ಉಳಿತಾಯ ಖಾತೆ ಠೇವಣಿಯಲ್ಲಿ 3672 ಕೋಟಿ ಪ್ರಗತಿ ಸಾಧಿಸಿದ್ದು, ಶೇ.14.54ರಷ್ಟು ವೃದ್ಧಿ ಸಾಧಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement