ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರೈತರ ನಿರ್ಲಕ್ಷ್ಯ ಕಾಂಗ್ರೆಸ್‌ಗೆ ಮುಳುವಾಯ್ತು

Mainashree
Updated On : 17 May 2014, 9:50 am

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರವು ನಿರೀಕ್ಷಿತ ಅಭಿವೃದ್ಧಿ ಸಾಧಿಸದಿರುವುದು ಹಾಗೂ ರೈತರ ಬಗೆಗಿನ ನಿರ್ಲಕ್ಷ್ಯ ಧೋರಣೆಯಿಂದಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಕಾರಣವಾಗಿದೆ ಎಂದು ಬಿ. ಶ್ರೀರಾಮುಲು ಹೇಳಿದರು.
ಮತಎಣಿಕೆ ಕೇಂದ್ರದಲ್ಲಿ ಗೆಲವು ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಜನರ ನಿರೀಕ್ಷೆ ಹುಸಿಗೊಳಿಸಿದೆ. ಇದರಿಂದಾಗಿ ರಾಜ್ಯದ ಜನ ಗುಜರಾತಿನಂತೆ ಕರ್ನಾಟಕವೂ ಅಭಿವದ್ಧಿಯಾಗಬೇಕು ಎಂಬ ಕಾಳಜಿಯಿಂದ ಬಿಜೆಪಿಗೆ ಮತಹಾಕಿದ್ದಾರೆ. ಮೋದಿ ಜತೆ ಕೆಲಸ ಮಾಡುವುದು ನನ್ನ ಸೌಭಾಗ್ಯವಾಗಿದೆ ಎಂದರು.
ಇದು ನನ್ನ ಗೆಲವುಲ್ಲ, ಸಮಸ್ತ ಮತದಾರರ ಗೆಲವು. ಜಿಲ್ಲೆಯ ಜನ ಗೆಲವು. ಇಂದು ನರೇಂದ್ರ ಮೋದಿ ಗೆಲುವಾಗಿದೆ. ನರೇಂದ್ರ ಮೋದಿ ಒಬ್ಬ ದೂರದೃಷ್ಟಿ ಇರುವ ದೇಶಭಕ್ತ. ಅವರ ನಾಯಕತ್ವದಲ್ಲಿ ದೇಶ ಸುವರ್ಣ ಅಧ್ಯಾಯ ಬರೆಯಲಿದೆ ಎಂದರು.
ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡಲು ಬಿಜೆಪಿ ಬದ್ಧವಾಗಿದೆ, ಬಿಜೆಪಿ ಪ್ರಚಂಡ ಗೆಲವು ಯುಪಿಎ ಸರ್ಕಾರದ 10 ವರ್ಷಗಳ ಬ್ರಹ್ಮಾಂಡ ಭ್ರಷ್ಚಾಚಾರದ ವಿರುದ್ಧ ಮಾತ್ರವಲ್ಲ, ಕರ್ನಾಟಕ ಸರ್ಕಾರದ 1 ವರ್ಷದ ಆಡಳಿತ ವಿರುದ್ಧ ಜನತೆ ನೀಡಿದ ತೀರ್ಪಾಗಿದೆ. ಮುಂಬರುವ ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ, 2018ರಲ್ಲಿ ನಡೆಯುವ  ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement