ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಗ್ಗಲಗಟ್ಟಿ ತಾಂಡಾ: ವಾಂತಿ- ಭೇದಿ

Mainashree
Updated On : 18 May 2014, 10:07 am

ಹೂವಿನಹಡಗಲಿ: ತಾಲೂಕಿನ ಕಗ್ಗಲಗಟ್ಟಿ ತಾಂಡಾದಲ್ಲಿ ಕಲುಷಿತ ನೀರು ಕುಡಿದು ಮೂರು ದಿನಗಳಿಂದ ವಾಂತಿ, ಭೇದಿಯಿಂದ ಜನರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಂಡಾಕ್ಕೆ ಭೇಟಿ ನೀಡಿರುವ ಅಧಿಕಾರಿಗಳ ಸರ್ವೇ ಮಾಹಿತಿ ಪ್ರಕಾರ ಕೇವಲ 28 ರೋಗಿಗಳಿಗೆ ಮಾತ್ರ ವಾಂತಿ, ಭೇದಿಯಾಗಿದೆ. ರೋಗ ಹತೋಟಿಗೆ ಬಂದಿದ್ದು, ಇಬ್ಬರನ್ನು ದಾವಣಗೆರೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ರವಾನೆ ಮಾಡಲಾಗಿದೆ.
ಕುಡಿಯುವ ನೀರು ಬಂದ್:
ಕೊಳವೆ ಬಾವಿ ನೀರು ಪೈಪ್‌ಲೈನ್ ಮೂಲಕ ಮನೆಗಳಿಗೆ ನೀರು ಪೂರೈಕೆಯಾಗುತ್ತಿತ್ತು, ವಾಂತಿ, ಭೇದಿಯಾಗಿರುವ ಹಿನ್ನೆಲೆಯಲ್ಲಿ ನೇರವಾಗಿ ಕೊಳವೆಬಾವಿ ಹತ್ತಿರ ಪೈಪ್‌ಲೈನ್ ಕೊರೆದು ನೇರವಾಗಿ ನೀರು ಪೂರೈಕೆ ಮಾಡುತ್ತಿದ್ದಾರೆ. ಇದಕ್ಕೆ ಕ್ಲೋರಿನೇಷನ್ ಮಿಶ್ರಣ ಮಾಡಿ ನೀರು ಪೂರೈಕೆ ಮಾಡಲು ತಾಂಡಾದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸಮರ್ಪಕವಾಗಿಲ್ಲ ಎನ್ನುತ್ತಾರೆ.
ಆಸ್ಪತ್ರೆಗೆ ಭೇಟಿ ನೀಡಿದ್ದ ಡಿಎಚ್‌ಒ ಪಾಟೀಲ್ ಸ್ಥಳದಲ್ಲೇ ಮಸಲವಾಡ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ತಾಪಂ ಇಒಗೆ ದೂರವಾಣಿ ಕರೆ ಮಾಡಿದರೂ ಮಾತನಾಡುವ ಗೋಜಿಗೆ ಹೋಗಲಿಲ್ಲ. ತಾಂಡಾ ಜನತೆಗೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಈ ಕುರಿತು ಜಿಪಂ ಸಿಇಒ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ತಿಳಿಸುತ್ತೇವೆಂದು ಪತ್ರಕರ್ತರಿಗೆ ಮಾಹಿತಿ ನೀಡಿದರು.
ತಾತ್ಕಾಲಿಕ ಆಸ್ಪತ್ರೆ:
ತಾಂಡಾದ ಅಂಗನವಾಡಿ ಕೇಂದ್ರದಲ್ಲಿ ಇಬ್ಬರು ವೈದ್ಯರು, ಸ್ಟಾಫ್ ನರ್ಸ್, 4 ಜನ ಆಶಾ ಕರ್ಯಕರ್ತೆಯರು, ಆರೋಗ್ಯ ಶಿಕ್ಷಣಾಧಿಕಾರಿ ಸೇರಿದಂತೆ ಅಗತ್ಯ ಮಾತ್ರೆಗಳು ಮತ್ತು ಔಷಧಿಗಳ ಸಂಗ್ರಹ ಮಾಡಲಾಗಿದೆ. 108 ವಾಹನವೂ ಸ್ಥಳದಲ್ಲೇ ನಿಲ್ಲಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಈಗಾಗಲೇ ದಾವಣಗೆರೆ, ಹರಪನಹಳ್ಳಿ, ಹೊಸಪೇಟೆ ಸೇರಿದಂತೆ ಇತರ ಕಡೆಗಳಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ದಾವಣಗೆರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಹೇಳುತ್ತಾರೆ ಗ್ರಾಮಸ್ಥರು.
ಶುಕ್ರವಾರ ಕಾಲರಾ ನಿಯಂತ್ರಣ ತಂಡ ಸೇರಿದಂತೆ ಶನಿವಾರ ಡಿಎಚ್‌ಒ ಮತ್ತು ತಂಡ ಕಗ್ಗಲಗಟ್ಟಿ ತಾಂಡಾಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಚರಂಡಿ ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರು ಪೂರೈಕೆಗೆ ಗ್ರಾಪಂಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಜಿಪಂ ಸಿಇಒಗೆ ಮಾಹಿತಿ ನೀಡುತ್ತೇವೆಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement