ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕನ್ನಡಿಗರಿಗೆ ಉದ್ಯೋಗ ನೀಡದ ಕಾರ್ಖಾನೆಗಳು: ಪಟ್ನಂ ಭಾಸ್ಕರ್

Lingaraj Badiger
Updated On : 19 May 2014, 11:43 am

ಬಳ್ಳಾರಿ: ಜಿಲ್ಲೆಯ ತೋರಣಗಲ್ ಜೆಎಸ್ಡಬ್ಲ್ಯೂ ಸ್ಟೀಲ್ ಕಾರ್ಖಾನೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡದೇ ವಂಚಿಸುತ್ತಿದ್ದು, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿವೆ ಎಂದು ಬಿಜೆಪಿ  ಹಿಂದುಳಿದ ವರ್ಗದ ನಗರ ಘಟಕ ಅಧ್ಯಕ್ಷ ಪಟ್ನಂ ಭಾಸ್ಕರ್ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್(ಜೆಎಸ್ಡಬ್ಲ್ಯೂ ಸ್ಟೀಲ್ ವರ್ಕ್ಸ್) ಸೇರಿದಂತೆ ವಿವಿಧ ಕಾರ್ಖಾನೆಗಳು ಕನ್ನಡಿಗರಿಗೆ ಕೇವಲ ಡಿ ಗ್ರೂಪ್ ನೌಕರಿಗಳನ್ನು ನೀಡುತ್ತಿವೆ. ಅದನ್ನು ಹೊರತುಪಡಿಸಿ ಯಾವುದೇ ಉನ್ನತ ಹುದ್ದೆಗಳನ್ನು ಸ್ಥಳೀಯರಿಗೆ ನೀಡುತ್ತಿಲ್ಲ. ಕರ್ನಾಟಕದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು, ಮೆರಿಟ್ ಮೇಲೆ ಉತ್ತೀರ್ಣರಾದ, ತಾಂತ್ರಿಕ ಜ್ಞಾನ ಇರುವ ರಾಜ್ಯದ ಪ್ರತಿಭಾವಂತರಿಗೆ ಅನ್ಯಾಯ ಮಾಡಲಾಗುತ್ತಿದೆ. ಸರೋಜಿನಿ ಮಹಿಷಿ ವರದಿ ಸಂಪೂರ್ಣವಾಗಿ ಗಾಳಿಗೆ ತೂರಿರುವ ಇಲ್ಲಿನ ಬೃಹತ್ ಕೈಗಾರಿಕೆಗಳು ಇನ್ನಾದರೂ ಕನ್ನಡಿಗರಿಗೆ ಪ್ರಮುಖ ಹುದ್ದೆಗಳಲ್ಲಿ ಅವಕಾಶ ನೀಡಬೇಕು. ಇಲ್ಲದೇ ಹೋದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೂ ಮುನ್ನ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇದ್ದ ಕೃಷಿ ಚಟುವಟಿಕಗಳು ಇದೀಗ ಸ್ಥಗಿತಗೊಳ್ಳುತ್ತಿವೆ. ಕಾರ್ಖಾನೆಗಳಿಂದ ಹೊರಸೂಸುವ ತ್ಯಾಜ್ಯ, ರಸಾಯನಿಕ ಹೊಗೆಯಿಂದ ಜನರ, ಪ್ರಾಣಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಣ ಬೀರುತ್ತಿದ್ದು, ಬೆಳೆದ ಬೆಳೆ ಕೈಗೆಟುಕದೆ ರೈತರು ಆತಂಕದಲ್ಲಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.     
ಘಟಕದ ಜಿಲ್ಲಾಧ್ಯಕ್ಷ ದತ್ತಾತ್ರೇಯ ರೆಡ್ಡಿ ಮಾತನಾಡಿದರು. ಪಕ್ಷದ ಮುಖಂಡ ಸಿ. ರಾಮಚಂದ್ರ, ಕೆ.ಎಂ. ಜಯಗೋಪಾಲ್, ಶ್ರೀನಿವಾಸ್ ಪಾಟೀಲ್, ಯು. ಉರುಕುಂದ್, ಕೆ. ಮಲ್ಲೇಶ್, ಅಶೋಕ್ ಕುಮಾರ್, ಬಿ. ಮೆಹಬೂಬ್ ಬಾಷಾ ಮತ್ತು ಗಾದಿಲಿಂಗ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement