ಪೂರ್ಣತೆಗೆ ಸಾಹಿತ್ಯ ಪೂರಕ
ಕೂಡ್ಲಿಗಿ: ಜೀವನ ಮೌಲ್ಯಗಳ ಅರ್ಥಪೂರ್ಣತೆಗೆ ಸಾಹಿತ್ಯ ಮನೋಭಾವ, ಸಾಂಸ್ಕೃತಿಕ ಮನಸ್ಸುಗಳು ಪೂರಕ ಎಂದು ವಿಜಯನಗರ ಕಾಲೇಜು ಉಪನ್ಯಾಸಕ ಡಾ. ಮೃತ್ಯುಂಜಯ ರುಮಾಲೆ ಹೇಳಿದರು.
ಅವರು ಭಾನುವಾರ ತಾಲೂಕಿನ ಕಾನಹೊಸಹಳ್ಳಿ ಕೆಎಂಎಸ್ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಸಾಹಿತಿ ಯು. ಜಗನ್ನಾಥ ರಚಿಸಿದ 'ಕೇಳು ಜಾಣ' ಪುಸ್ತಕ ಬಿಡುಗಡೆ, ಶಿಷ್ಯ ಬಳಗೋತ್ಸವ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಚಿತ್ರದುರ್ಗ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ. ವೀರೇಶ್ ಮಾತನಾಡಿ, ಗುರು- ಹಿರಿಯರ ಬಗ್ಗೆ ಗೌರವ ಕುಂದುತ್ತಿರುವ ಈ ಸಮಯದಲ್ಲಿ ಶಿಷ್ಯಬಳಗ ತಮ್ಮ ಗುರುಗಳನ್ನು ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಗುರು ಪರಂಪರೆ, ಸಂಸ್ಕಾರಕ್ಕೆ ಮನ್ನಣೆ ನೀಡಿದಂತಾಗುತ್ತದೆ ಎಂದರು.
ಜಗಳೂರು ನಳಂದ ಕಾಲೇಜು ಉಪನ್ಯಾಸಕ ಡಾ. ಎಚ್.ಎಸ್. ವಸಂತ ಸಜ್ಜನ ವಿಶೇಷ ಉಪನ್ಯಾಸ ನೀಡಿದರು. ಸಾಹಿತಿ ಯು. ಜಗನ್ನಾಥ್ ಪ್ರಾಸ್ತಾವಿಕ ಮಾತನಾಡಿದರು. ಕಾನಮಡುಗು ದಾ.ಮ. ಶರಣಾರ್ಯ, ಕೋಡಿಹಳ್ಳಿ ಬಸವ ಭೃಂಗೇಶ್ವರ ಶ್ರೀ ಸಾನ್ನಿಧ್ಯ ವಹಿಸಿದ್ದರು. ವಿದ್ವಾಂಸ ಡಾ. ಎ. ವೃಷಭೇಂದ್ರಾಚಾರ್ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಎರಿಸ್ವಾಮಿ, ಅಯ್ಯನಹಳ್ಳಿ ಎಚ್. ಚಿದಾನಂದಪ್ಪ, ಕೆ. ತಿಪ್ಪೇಸ್ವಾಮಿ, ಎನ್.ಎಂ. ರವಿಕುಮಾರ್, ಕೆ.ಎಂ. ಹರ್ಷವರ್ಧನ, ಟಿ. ಓಂಕಾರಪ್ಪ, ಡಾ. ಎನ್. ತಿಪ್ಪಾಶೆಟ್ಟಿ, ಎ.ಎಸ್. ಕೊಟ್ರಯ್ಯ, ತಳವಾರ ಶರಣಪ್ಪ, ಶ್ಯಾಂಸುಂದರ್ ಸಫಾರೆ, ಯು. ನಾಗೇಶ್, ಎಂ. ಷಡಕ್ಷರಿ, ಡಾ. ಈಶ್ವರಪ್ಪ, ಕೆ. ಸುಭಾಶ್ಚಂದ್ರ, ಲೋಕಿಕೆರೆ ಧನಂಜಯ ಇತರರಿದ್ದರು.
ರಂಗನಿರ್ದೇಶಕ ಸಾಂಬಶಿವ ದಳವಾಯಿ, ಕ್ಯಾಷಿಯೋ ಕರಿಯಪ್ಪ, ಹಾರ್ಮೋನಿಯಂ ವಾದಕ ಇಮಡಾಪುರ ಪಿ. ತಿಪ್ಪೇಸ್ವಾಮಿ, ಶಹನಾಯಿ ವಾದಕ ಕೆ.ಟಿ. ನಾಗರಾಜ್ ಮುಂತಾದ ಸಾಧಕರನ್ನು ಸನ್ಮಾನಿಸಲಾಯಿತು.
ಚಿತ್ರದುರ್ಗ ಬಾಪೂಜಿ ವಿದ್ಯಾ ಸಂಸ್ಥೆ ಸಂಗೀತ ಶಿಕ್ಷಕ ಆರ್. ಸತೀಶಕುಮಾರ ಜಟ್ಟಿ ತ್ರಿಪದಿಗಳ ಗಾಯನ ನಡೆಸಿಕೊಟ್ಟರು.