ಕಸಾಪುರ ಪಾದಯಾತ್ರೆಗೆ ಚಾಲನೆ
ಬಳ್ಳಾರಿ: ಸ್ಥಳೀಯ ರಾಮೇಶ್ವರೀ ಟ್ರಸ್ಟ್ ಹಾಗೂ ಧ್ರುವ ನಾರಾಯಣ ಸಿಂಘಿ ಆ್ಯಂಡ್ ಸನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಬಳ್ಳಾರಿ ನಗರದಿಂದ ಸೀಮಾಂಧ್ರ ಪ್ರದೇಶದ ಪ್ರಸಿದ್ಧ ತೀರ್ಥ ಕ್ಷೇತ್ರ ಕಸಾಪುರಕ್ಕೆ ಭೇಟಿ ನೀಡುವ ಪಾದಯಾತ್ರೆಗೆ ಬುಧವಾರ ಚಾಲನೆ ದೊರೆಯಿತು.
ನಗರದ ಸತ್ಯನಾರಾಯಣ ಪೇಟೆಯ ಶ್ರೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ಶ್ರೀನಿವಾಸನಿಗೆ ಪ್ರಾತಃ ಕಾಲದ ಸುಪ್ರಭಾತ, ಅಭಿಷೇಕ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಅರ್ಚನೆ ಮಹಾ ಮಂಗಳಾರತಿಯ ನಂತರ ಬೆಳಗ್ಗೆ 6ರ ವೇಳೆಗೆ ಪಾದಯಾತ್ರೆಗೆ ಚಾಲನೆ ದೊರೆಯಿತು.
ನಗರದ ಹಾಗೂ ಮುಂಬೈ ನಗರ, ರಾಜಸ್ಥಾನದಿಂದ ಆಗಮಿಸಿರುವ ಸ್ತ್ರೀ, ಪುರುಷ, ಯುವಜನರಿರುವ ಹೆಚ್ಚಿನ ಸಂಖ್ಯೆಯ ಯಾತ್ರಿಗರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.