ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ಹಂಪಿ ವಿವಿ ಸಂಪರ್ಕ ತರಗತಿ ಉದ್ಘಾಟನೆ

Rashmi Kasaragodu
Updated On : 26 May 2014, 12:02 pm

ಹೊಸಪೇಟೆ: ಹಂಪಿ ಕನ್ನಡ ವಿವಿ ದೂರಶಿಕ್ಷಣ ನಿರ್ದೇಶನಾಲಯ ಸಂಪರ್ಕ ಕಾರ್ಯಕ್ರಮ ಉದ್ಘಾಟನೆ ವಿವಿಯ ಭುವನ ವಿಜಯದಲ್ಲಿ ಮೇ 26ರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ವಿವಿ ಕಾರ್ಯಕಾರಿ ಸಮಿತಿ ಸದಸ್ಯ ವಿ.ಸಿ. ಸವಡಿ ಉದ್ಘಾಟಿಸುವರು. ಸದಸ್ಯ ಸುಭಾಷ್ ಸಿಂಗ್ ಜಮಾದಾರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ಇತರರು ಭಾಗವಹಿಸುತ್ತಾರೆಂದು ವಿವಿ ದೂರಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ತಿಳಿಸಿದ್ದಾರೆ.
ಸಂಪರ್ಕ ತರಗತಿಗಳ ಕಾರ್ಯಕ್ರಮ: ಹಂಪಿ ಕನ್ನಡ ವಿವಿ ದೂರಶಿಕ್ಷಣ ನಿರ್ದೇಶನಾಲಯ 2013-14 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಸಂಪರ್ಕ ತರಗತಿಗಳ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪತ್ರಿಕೋದ್ಯಮ ಅಧ್ಯಯನ ಡಿಪ್ಲೋಮಾ, ಸ್ನಾತಕೋತ್ತರ ಎಂಜೆಎಂಎಸ್, ಮಾಹಿತಿ ಮತ್ತು ಸಂವಹ ತಂತ್ರಜ್ಞಾನ ಡಿಪ್ಲೋಮಾ ಮತ್ತು ನಾಟಕ ಕಲೆ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಸಂಪರ್ಕ ತರಗತಿ ಕಡ್ಡಾಯ. ಉಳಿದ ಕೋರ್ಸ್‌ನ ಸಂಪರ್ಕ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳು ನಿಯೋಜಿತ ಲೇಖನಗಳನ್ನು ಬರೆದುಕೊಡಬೇಕು. ನಿಯೋಜಿತ ಲೇಖನಗಳ ಪ್ರಶ್ನೆಗಳಿಗೆ ಮೇ 30, 2014ರ ಬಳಿಕ ಕನ್ನಡ ವಿಶ್ವವಿದ್ಯಾಲಯದ ವೆಬ್‌ಸೈಟ್ ಢಿಢಿಢಿ.್ಞಛಟಿಟಿಛಜಛ್ಡಟ್ಝಿಢಜ್ಠಡ್ಝಡಿಣ.್ಟ್ಠ್ಜ. ನೋಡಬಹುದು. ಶುಲ್ಕ ಪಾವತಿಸದವರು ಪರೀಕ್ಷಾ ಶುಲ್ಕ ಸೇರಿದಂತೆ ಪೂರ್ಣ ಶುಲ್ಕವನ್ನು ಜೂ. 30ರೊಳಗೆ ಒಳಗೆ ಪಾವತಿಸಬೇಕು. ಪರೀಕ್ಷಾ ಅರ್ಜಿಗಳನ್ನು ಪರೀಕ್ಷಾ ಶುಲ್ಕದೊಂದಿಗೆ ಸಲ್ಲಿಸಬೇಕು. ವಸತಿ ವ್ಯವಸ್ಥೆಯನ್ನು ವಿದ್ಯಾರ್ಥಿಗಳೇ ಮಾಡಿಕೊಳ್ಳಬೇಕು.
ಸ್ನಾತಕೋತ್ತರ ಕನ್ನಡ ಮೇ 26ರಿಂದ ಜೂ. 1ರ ವರೆಗೆ, ಕನ್ನಡ ಸಾಹಿತ್ಯ ಡಿಪ್ಲೋಮಾ ಮೇ 26ರಿಂದ ಜೂ. 1ರ ವರೆಗೆ, ಶಾಸನಶಾಸ್ತ್ರ ಡಿಪ್ಲೋಮಾ ಜೂ. 2ರಿಂದ ಜೂ. 8ರ ವರೆಗೆ, ಸ್ನಾತಕೋತ್ತರ ಚರಿತ್ರೆ ಜೂ. 9ರಿಂದ ಜೂ. 15ರ ವರೆಗೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಡಿಪ್ಲೋಮಾ ಜೂ. 12ರಿಂದ ಜೂ. 19ರ ವರೆಗೆ, ಪುರಾತತ್ವ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಡಿಪ್ಲೋಮಾ ಜೂ. 16ರಿಂದ ಜೂ. 22ರ ವರೆಗೆ, ಭಾಷಾಂತರ ಅಧ್ಯಯನ ಡಿಪ್ಲೋಮಾ ಜೂ. 17ರಿಂದ ಜೂ. 23ರ ವರೆಗೆ, ನಾಟಕ ಕಲೆ ಡಿಪ್ಲೋಮಾ ಜೂ. 19ರಿಂದ ಜೂ. 28ರ ವರೆಗೆ, ಪತ್ರಿಕೋದ್ಯಮ ಡಿಪ್ಲೋಮಾ ಜೂ. 20ರಿಂದ ಜೂ. 30ರ ವರೆಗೆ, ಸ್ನಾತಕೋತ್ತರ ಎಂಜೆಎಂಎಸ್ ಜೂ. 20ರಿಂದ ಜೂ. 30ರ ವರೆಗೆ, ಸ್ನಾತಕೋತ್ತರ ಸಮಾಜಶಾಸ್ತ್ರ ಜೂ. 24ರಿಂದ ಜೂ. 30ರ ವರೆಗೆ ಸಂಪರ್ಕ ತರಗತಿಗಳು ನಡೆಯಲಿವೆ ಎಂದು ದೂರಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ವಿರೂಪಾಕ್ಷಿ ಪೂಜಾರಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement