ಬಳ್ಳಾರಿ

ನಾಟಕ ಕಲೆಗೆ ಮಹಿಳೆ ಮುಖ್ಯ

ಹೊಸಪೇಟೆ: ಮಹಿಳಾ ಕಲಾವಿದರು ಇಲ್ಲದಿದ್ದರೆ ವೃತ್ತಿ ರಂಗಭೂಮಿ ಉಳಿಯಲು ಸಾಧ್ಯವೇ ಇಲ್ಲ ಎಂದು ಬೆಂಗಳೂರಿನ ಸಾಹಿಸಿ ಹೂಲಿ ಶೇಖರ್ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿಯ ದುರ್ಗಾದಾಸ್ ರಂಗಮಂದಿರದಲ್ಲಿ ಮಹಿಳಾ ವೃತ್ತಿ ರಂಗ ಕಲಾವಿದರ ಸಂಘ ಹಮ್ಮಿಕೊಂಡಿದ್ದ ಮಹಿಳಾ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮರಿಯಮ್ಮನಹಳ್ಳಿ ಗ್ರಾಮವು ವೃತ್ತಿ ರಂಗಭೂಮಿಗೆ ನೂರಾರು ಕಲಾವಿದರನ್ನು ನೀಡಿದೆ. ಪ್ರತಿಯೊಂದು ಮನೆಯಲ್ಲಿಯೂ ಕಲಾವಿದರು ಇರುವುದರಿಂದ ಮರಿಯಮ್ಮನಹಳ್ಳಿಯನ್ನು ಕಲಾವಿದರ ಕಾಶಿ ಎನ್ನಬಹುದು. ಕಲಾವಿದರಿಗೆ ಸಮಾಧಾನ ಮತ್ತು ನೆಮ್ಮದಿಯನ್ನು ನೀಡುವ ಸ್ಥಳವೇ ಕಲಾವಿದರ ಕಾಶಿಯಾಗಿದೆ. ಈ ಹಿನ್ನೆಲೆಯಲ್ಲಿ ಮರಿಯಮ್ಮನಹಳ್ಳಿಯಲ್ಲಿ ನಿರಂತರವಾಗಿ ರಂಗ ಚಟುವಟಿಕೆಗಳು ನಡೆಯುತ್ತಿರುವುದರಿಂದ ರಂಗಭೂಮಿ ಜೀವಂತವಾಗಿದೆ ಎಂದು ಹೇಳಿದರು.
ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಮಹಿಳಾ ಕಲಾವಿದರು ರಂಗಭೂಮಿಗೆ ಬರುತ್ತಿಲ್ಲ. ಹೊಸ ಮಹಿಳಾ ಕಲಾವಿದರು ಹೆಚ್ಚಾಗಿ ರಂಗಭೂಮಿಯಲ್ಲಿ ತೊಡಗಿಕೊಂಡಾಗ ಮಾತ್ರ ರಂಗಭೂಮಿ ಉಳಿದು ಬೆಳೆಯಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಹೊಸ ಮಹಿಳಾ ಕಲಾವಿದರು ಬರದೇ ಹೋದರೆ ರಂಗಭೂಮಿಗೆ ಆಘಾತಕಾರಿ ದಿನಗಳು ಕಾದಿವೆ. ರಂಗಭೂಮಿ ಉಳಿಸಿ ಬೆಳೆಸಲು ರಂಗಕಲಾವಿದರು ಮುಂದಾಗಬೇಕು ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಂಗ ಸಂಘಟನೆ ಮಾಡುವುದು ಅತ್ಯಂತ ಕಷ್ಟಕರವಾಗಿದ್ದು, ಕಲಾವಿದರು ಸಂಘಟನೆಗೊಂಡು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕಾಗಿದೆ. ಕಲಾವಿದರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನಗಳನ್ನು ನೀಡಿ ಗೌರವಿಸಬೇಕು. ಕಲಾವಿದರಿಗೆ ಸರ್ಕಾರದಿಂದ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಅವರು ಹೇಳಿದರು.
ಮರಿಯಮ್ಮನಹಳ್ಳಿಯ ಖ್ಯಾತ ವೈದ್ಯ ಡಾ. ಬಿ. ಅಂಬಣ್ಣ, ಹಗರಿಬೊಮ್ಮನಹಳ್ಳಿ ಮಕ್ಕಳ ತಜ್ಞ ಡಾ. ಟಿ. ಸತ್ಯನಾರಾಯಣ, ನಾಟಕ ಅಕಾಡೆಮಿ ಸದಸ್ಯ ಷಡಕ್ಷರಪ್ಪ, ಹಿರಿಯ ರಂಗ ಕಲಾವಿದ ಈಶ್ವರಪ್ಪ ನೀಲಗುಂದ, ಮರಿಯಮ್ಮನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾ. ಕೆ. ಲಕ್ಷ್ಮಣ, ಕಲಾವಿದರಾದ ಬೇಬಿ ತಾಳಿಕೋಟೆ, ನಂದಾ ಬಾಗಲಕೋಟೆ, ನೀಲಮ್ಮ ಏಣಿಗಿ, ಸಿದು ನಾಲ್ವತವಾಡ್, ಮಹಿಳಾ ವೃತ್ತಿ ರಂಗ ಕಲವಾದರ ಸಂಘದ ಅಧ್ಯಕ್ಷೆ ಡಾ. ಕೆ. ನಾಗರತ್ನಮ್ಮ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಗೂ ಮುನ್ನ ನಡೆದ ವಿಚಾರ ಸಂಕಿರಣದಲ್ಲಿ ಬಸರಕೋಡಿನ ಸಾಹಿತಿ ಮೇಟಿ ಕೊಟ್ರಪ್ಪ ನಾಟಕ ಮತ್ತು ಸಾಮಾಜಿಕತೆ ಕುರಿತು ಮಾತನಾಡಿದರು. ಉಪನ್ಯಾಸಕ ಎಂ. ಸೋಮೇಶ್ ಉಪ್ಪಾರ್ ರಂಗಭೂಮಿ ಕ್ಷೇತ್ರಕ್ಕೆ ಮರಿಯಮ್ಮನಹಳ್ಳಿಯ ಕೊಡುಗೆ ಕುರಿತು ಮಾತನಾಡಿದರು.
ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂತರ ಕಲಾವಿದೆ ಕೂಡ್ಲಿಗಿಯ ಶಿವಕುಮಾರಿ ಅವರಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಮರಿಯಮ್ಮನಹಳ್ಳಿಯ ವೃತ್ತಿ ರಂಗ ಕಲಾವಿದರ ಸಂಘದ ಕಲಾವಿದರಿಂದ ಡಾ. ಕೆ. ನಾಗರತ್ನಮ್ಮ ನಿರ್ದೇಶನದ ಬೇಲೂರು ಕೃಷ್ಣಮೂರ್ತಿ ರಚಿಸಿರುವ ನಾರದ ವಿನೋದ ನಾಟಕ ಪ್ರದರ್ಶನ ನಡೆಯಿತು.
ನಾಟಕದಲ್ಲಿ ಇಳಕಲ್ ಉಮಾರಾಣಿ, ಭಾವಳ್ಳಿ ರೇಣುಕಾ, ಗೌರಿ ಜೋಗತಿ, ಶೋಭಾ, ಕವಿತ ಜೋಗತಿ ನಾಟಕದಲ್ಲಿ ಅಭಿನಯಿಸಿದರು. ಕೂಡ್ಲಿಗಿಯ ಶಿವಕುಮಾರಿ ನಾಟಕಕ್ಕೆ ಗಾಯನ ನೀಡಿದರು. ಡಿ.ಎಂ. ತೋಟಯ್ಯಸ್ವಾಮಿ ಕ್ಯಾಷಿಯೋ ವಾದನ, ಮೋರಿಗೇರಿ ವಿರುಪಾಕ್ಷಪ್ಪ ತಬಲಾ ಸಾತ್ ನೀಡಿದರು. ಜಿ. ರಾಘವೇಂದ್ರ ಬೆಳಕು ವ್ಯವಸ್ಥೆಗೊಳಿಸಿದ್ದರು. ಉಪನ್ಯಾಸಕ ಎಂ. ಸೋಮೇಶ್ ಉಪ್ಪಾರ್ ಸ್ವಾಗತಿಸಿ ನಿರೂಪಿಸಿದರು.
ಮರಿಯಮ್ಮನಹಳ್ಳಿ ಗ್ರಾಮವು ವೃತ್ತಿ ರಂಗಭೂಮಿಗೆ ನೂರಾರು ಕಲಾವಿದರನ್ನು ನೀಡಿದೆ.  ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಕಲಾವಿದರು ಇರುವುದರಿಂದ ಮರಿಯಮ್ಮನಹಳ್ಳಿಯನ್ನು ಕಲಾವಿದರ ಕಾಶಿ ಎನ್ನಬಹುದು. ಕಲಾವಿದರಿಗೆ ಸಮಾಧಾನ ಮತ್ತು ನೆಮ್ಮದಿಯನ್ನು ನೀಡುವ ಸ್ಥಳವೇ ಕಲಾವಿದರ ಕಾಶಿಯಾಗಿದೆ.
- ಹೂಲಿ ಶೇಖರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!