ಹಂಪಿ: ಇಂದಿನಿಂದ ಸಾಂಸ್ಕೃತಿಕೋತ್ಸವ ಸಮಾರಂಭ
ಹೊಸಪೇಟೆ: ಹಂಪಿ ವಿರೂಪಾಕ್ಷ ದೇವಾಲಯ ಆವರಣದಲ್ಲಿ ಕಡ್ಡಿರಾಂಪುರ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದ ಸಾಂಸ್ಕೃತಿಕೋತ್ಸವ ಸಮಾರಂಭ ಮೇ 28, 29ರಂದು ಹಂಪಿಯಲ್ಲಿ ನಡೆಯಲಿದೆ.
ಸಹಾಯಕ ಆಯುಕ್ತ ಪಿ. ಸುನೀಲ್ ಕುಮಾರ್ ಉದ್ಘಾಟಿಸುವರು. ವಿದ್ಯಾರಣ್ಯಪೀಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ರಮೇಶ್ ಕೋನರಡ್ಡಿ, ಜಿಪಂ ಸದಸ್ಯೆ ಅನಿತಾ ಆನಂದ್, ತಾಪಂ ಸದಸ್ಯ ಎಲ್. ಭೀಮಾನಾಯ್ಕ, ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ, ವಿರೂಪಾಕ್ಷ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶರಾವ್, ಹಂಪಿ ಗ್ರಾಪಂ ಅಧ್ಯಕ್ಷೆ ಸ್ವಾತಿ ಸಿಂಗ್, ಪಿಡಿಒ ವೆಂಕಟಲಕ್ಷ್ಮೀ, ವಿಜಯ ನಗರ ಕಾಲೇಜಿನ ಉಪನ್ಯಾಸಕ ಡಾ. ಶಿವಾನಂದ, ನಗರಸಭೆ ಮಾಜಿ ಸದಸ್ಯ ಕೆ. ಕೊಟ್ರೇಶ್ ಭಾಗವಹಿಸುವರು. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ್ ಅಧ್ಯಕ್ಷತೆ ವಹಿಸುವರು. ಮೋಹನ್ ಚಿಕ್ಕಭಟ್, ಮಾವಿನಹಳ್ಳಿ ಬಸವರಾಜ, ಗ್ರಾಪಂ ಸದಸ್ಯ ಕೆ. ಷಣ್ಮುಖ ಗೌಡ, ಕೆ. ಉದ್ದಾನಪ್ಪ, ತಿಮ್ಮಪ್ಪ, ಶ್ರೀನಿವಾಸ ಪಾಲ್ಗೊಳ್ಳುವರು.
ಕುಮಟಾದ ಕುಮಾರ ಭಾರ್ಗವ ರಾವ್ ಕೊಳಲು ವಾದನ, ಸಂಗೀತ ಶಿಕ್ಷಕಿ ಪುಷ್ಪಾವತಿ ಹಿಂದೂಸ್ತಾನಿ ಗಾಯನ, ಭಜನ್ ಸಾಮ್ರಾಟ್ ಅನಂತ ಕುಲಕರ್ಣಿ ಭಕ್ತಿಗೀತೆ, ಸ್ವರ್ಣಮುಖಿ ಭರತನಾಟ್ಯ ಕಲಾ ಸಂಸ್ಥೆ ಭರತ ನಾಟ್ಯ ಪ್ರಸ್ತುತ ಪಡಿಸುವರು. ವೀರೇಶ ಹಿಟ್ನಾಳ್ ಹಾರ್ಮೋನಿಯಂ ಸಾಥ್, ಶ್ರೀಧರ ಮರೋಳ, ಕೊಟ್ರೇಶ ಚಲವಾದಿ ತಬಲಾ ಸಾಥ್ ನೀಡಲಿದ್ದಾರೆ.
ಮೇ 29ರಂದು ನೀಲಾಲೋಚನ ಶೀಲವಂತ ವಚನ ಗಾಯನ, ಅಕ್ಷತಾ ಭಕ್ತಿಗೀತೆ, ಹೊಸಪೇಟೆ ಯಲ್ಲಪ್ಪ ಭಂಡಾರದಾರ್ ಜಾನಪದ ಗೀತೆ, ದಾಸರ ಯಲ್ಲಪ್ಪ ತತ್ವ ಪದ, ಅಲ್ಲಾಭಕ್ಷಿ ಶಿಷ್ಯವೃಂದ ಜಾನಪದ ನೃತ್ಯ ನಡೆಸಿಕೊಡಲಿದ್ದಾರೆಂದು ಕಲಾವೃಂದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ ತಿಳಿಸಿದ್ದಾರೆ.