ಬೀದರ್

ಬ್ಯಾಡ್ಮಿಂಟನ್, ಹಾಕಿ ಪಂದ್ಯಾವಳಿ ತಂಡದ ಆಯ್ಕೆ

ಬೀದರ್: ಪ್ರಸಕ್ತ ಸಾಲಿನ ಅಖಿಲ ಭಾರತ ನಾಗರೀಕ ಸೇವಾ ಕ್ರೀಡಾಕೂಟದ ಅಂಗವಾಗಿ ಬ್ಯಾಡ್ಮಿಂಟನ್ ಮತ್ತು ಹಾಕಿ ಪಂದ್ಯಾವಳಿಗಳನ್ನು ಫೆ. 25ರಿಂದ ಮಾರ್ಚ್ 3ರವರೆಗೆ ನಡೆಸಲು  ತೀರ್ಮಾನಿಸಲಾಗಿದೆ.
  ಈ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದ ಬ್ಯಾಡ್ಮಿಂಟನ್ ಮತ್ತು ಹಾಕಿ ತಂಡದ ಆಯ್ಕೆಯನ್ನು ಫೆ. 4 ರಂದು ನಡೆಸಲಾಗುವುದು.
  ಹಾಕಿ ಕ್ರೀಡೆಯ ತಂಡವನ್ನು ಬೆಂಗಳೂರಿನ ಅಕ್ಕಿ ತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ಹಾಕಿ ತರಬೇತುದಾರರಾದ ವೆಂಕಟೇಶ್ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಈ ಕ್ರೀಡೆಯಲ್ಲಿ ಭಾಗವಹಿಸುವ ಬೀದರ್ ಜಿಲ್ಲಾ ಸ್ವರ್ಧಾಳುಗಳು ತಿಳಿಸಿದ ಸ್ಥಳದಲ್ಲಿ ಫೆ. 4ರಂದು ಬೆಳಿಗ್ಗೆ 8 ಗಂಟೆಯೊಳಗಾಗಿ ವರದಿ ಮಾಡಿಕೊಳ್ಳಲು ತಿಳಿಸಿದ್ದಾರೆ. ಬ್ಯಾಡ್ಮಿಂಟನ್ ತಂಡವು ರಾಜ್ಯ ಯುವ ಕೇಂದ್ರ ಬ್ಯಾಡ್ಮಿಂಟನ್ ಅಂಕಣದಲ್ಲಿ  ಬ್ಯಾಡ್ಮಿಂಟನ್ ತರಬೇತುದಾರ ಬಿಎನ್. ಸುಧಾಕರ್ ನೇತೃತ್ವದಲ್ಲಿ ಆಯ್ಕೆ ನಡೆಸಲಾಗುವುದು.
  ಆದ್ದರಿಂದ ಈ ಕ್ರೀಡೆಯಲ್ಲಿ ಭಾಗವಹಿಸುವ ಜಿಲ್ಲೆಯ ಸ್ಪರ್ಧಾಳುಗಳು ಮೇಲಿನ ಸ್ಥಳದಲ್ಲಿ ಫೆ. 4 ರಂದು ಬೆಳಿಗ್ಗೆ 8 ಗಂಟೆ ಒಳಗಾಗಿ ವರದಿ ಮಾಡಿಕೊಳ್ಳಬೇಕೆಂದು ಬೀದರ್ನ ಯುವಜನ  ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!