ಬೀದರ್

ಬಸವಕಲ್ಯಾಣ: ದಿನದ ಉಪವಾಸ ಸತ್ಯಾಗ್ರಹ

ಬಸವಕಲ್ಯಾಣ: ಕೇಂದ್ರ ಗೃಹ ಸಚಿವ ಶಿಂಧೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ದೇಶಾದ್ಯಂತ ನಡೆಸಿದ ಪ್ರತಿಭಟನೆಗೆ ಬೆಂಬಲಿಸಿ ತಾಲೂಕಾ ಭಾಜಪ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಸಂಪುಟದಿಂದ ಸಚಿವರನ್ನು ವಜಾ ಮಾಡಲು ಆಗ್ರಹಿಸಿ ತಹಸೀಲ್ ಕಾರ್ಯಾಲಯದ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
 ಬಿಜೆಪಿ ತಾಲೂಕಾಧ್ಯಕ್ಷ ಸುಧೀರ ಕಾಡಾದಿ ಮಾತನಾಡಿ, ಹಿಂದೂ ಭಯೋತ್ಪಾದನೆ ಬಗ್ಗೆ ಗೃಹ ಸಚಿವ ಶಿಂಧೆ ಅವರ ಹೇಳಿಕೆ ಶೋಭೆ ತರುವಂಥದ್ದಲ್ಲ. ಮೂಲ ಭಯೋತ್ಪಾದಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಬಗ್ಗೆ ತೀರಾ ಹಗುರವಾಗಿ ಮಾತನಾಡಿರುವುದು ಸಲ್ಲದು ಎಂದರು.
  ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರವಿ ಚಂದನಕೇರೆ ಮಾತನಾಡಿ, ಸಚಿವ ಸುಶೀಲ್ ಕುಮಾರ  ಶಿಂಧೆ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ನೀಡಿರುವ ಹೇಳಿಕೆಯಿಂದ ಅವರಲ್ಲಿನ ಬುದ್ಧಿಮಾಂಧ್ಯತೆ ಪ್ರದರ್ಶಿಸುತ್ತದೆ. ಶಿಂಧೆ ಕೂಡಲೇ ಕ್ಷಮೆಯಾಚಿಸಲು ಆಗ್ರಹಿಸಿ, ಸಂಪುಟದಿಂದ ಅವರನ್ನು ವಜಾಗೊಳಿಸಲು ಒತ್ತಾಯಿಸಿದರು.
  ಇದೇ ವೇಳೆ ಶಿವಾನಂದ ಕಲ್ಲೂರ್ ಮಾತನಾಡಿ, ಶಿಂಧೆ ಹಿಂದೂ ಸಮುದಾಯದ ಭಾವನೆಗಳಿಗೆ ಅವಮಾನಿಸಿದ್ದಾರೆ. ಅದಲ್ಲದೇ ನಿಜವಾದ ಭಯೋತ್ಪಾದಕರನ್ನು ಬೆನ್ನು ತಟ್ಟುವ ಪ್ರಶಂಸನೀಯ ಮಾತು ಅವರದ್ದಾಗಿದೆ ಎಂದು ಆರೋಪಿಸಿದರು.
  ಪ್ರತಿಭಟನಾ ಸಂದರ್ಭದಲ್ಲಿ ದೀಪಕ ಗಾಯಕವಾಡ್, ರಾಜಣ್ಣ ಶಿರಗಾಪುರ, ಭಾರ್ಗವ ಚಾರಿ, ಶಿವಕುಮಾರ ಖರೋನೆ, ಪ್ರಕಾಶ ಮಹಾಲಿಂಗ, ನೀಲೇಶ ಸುರ್ಯವಂಶಿ, ಸಂಗಮೇಶ ಖಂಡಾಳೆ, ಅಭಿಜಿತ ಶಿಂಧೆ, ವಿನೋದ ಚಿರಡೆ, ನಾಗೇಶ ಸಾಯಬಣ್ಣೆ ಸೇರಿದಂತೆ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು. ನಂತರ ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!