ಬೀದರ್

ಜನ ಮನ ಸೆಳೆದ ಸಾಹಸ ಪ್ರದರ್ಶನ

ಬೀದರ್: ಗಣರಾಜ್ಯೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ನಗರದ ನೆಹರು ಕ್ರೀಡಾಂಗಣದಲ್ಲಿ ವಿವಿಧ ರೀತಿಯ ಕಲಾ ಪ್ರದರ್ಶನಗಳನ್ನು ಜನರ ಮನ ಸೆಳೆಯುವಂತೆ ಪ್ರದರ್ಶಿಸಲಾಯಿತು.
  ಭಾಲ್ಕಿ ತಾಲೂಕಿನ ಕರಡ್ಯಾಳದಲ್ಲಿರುವ ಪಟ್ಟದ್ದೇವರ ಗುರುಕುಲ ಶಾಲೆಯ ವಿದ್ಯಾರ್ಥಿಗಳಿಂದ ಮಲ್ಲ ಕಂಬ ಹಗ್ಗದ ಮೇಲೆ ತನ್ನನ್ನು ತಾನು ತೇಲಾಡುವಂತಹ ಪ್ರದರ್ಶನ ಮನ ಸೆಳೆದವು. ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸ್ವಲ್ಪ ಮಟ್ಟಿಗೆ ಗಮನ ಬದಲಿಸಿದರೂ ಪ್ರಾಣಕ್ಕೆ ಅಪಾಯ ಕಾಡುತ್ತದೆ. ಇಂತಹ ಕರಾಮತ್ ತೋರಿಸಿದ್ದು, ಅಲ್ಲಿನ ಶಿಕ್ಷಕರ ಕರ್ತವ್ಯ ಕೂಡ ಮೆಚ್ಚುವಂತಹದ್ದಾಗಿದೆ.
  ಅಗ್ನಿಶಾಮಕ ದಳದಿಂದ ಅಗ್ನಿ ಅನಾಹುತವಾದರೆ ಏನು ಮಾಡಬೇಕು. ಬೇರೆ ಬೇರೆ ರೀತಿಯಿಂದ ಹೊತ್ತಿಕೊಳ್ಳುವ ಬೆಂಕಿಯನ್ನು ನಂದಿಸುವುದು ಹೇಗೆ? ಅಲ್ಲದೇ ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಉಪಚಾರಕ್ಕಾಗಿ ಹೇಗೆ ಕಳುಹಿಸಬೇಕು ಎನ್ನುವ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಮ್ಮ ಅಣಕು ಪ್ರದರ್ಶನದ ಮೂಲಕ ತಿಳಿಸಿದರು. ಈ ಅಣಕು ಪ್ರದರ್ಶನದಲ್ಲಿ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಸಾಹಸವನ್ನು ಮೆಚ್ಚುವಂತೆ ಜನರನ್ನು ಬೆರಗುಗೊಳಿಸಿತ್ತು.
 ಅದೇ ರೀತಿ ವಿದ್ಯಾರ್ಥಿಗಳು ಸಾಲಾಗಿ ಒಬ್ಬರ ಮೇಲೆ ಒಬ್ಬರು ನಿಂತು, ಸುಮಾರು ಮೂರು ಅಂತಸ್ತಿನ ವರೆಗೆ ಮೇಲೆ ಹೋಗಿ ರಾಷ್ಟ್ರ ಧ್ವಜ ಹಾರಿಸಿದ್ದ ಪುಟ್ಟ ಬಾಲಕನ ಧೈರ್ಯ ಮೆಚ್ಚುವಂತಿತ್ತು. ಗುರುಕುಲ ಹಾಗೂ ರಾಷ್ಟ್ರ ಧ್ವಜ ಹಾರಿಸಿದ ವಿದ್ಯಾರ್ಥಿಗಳ ಪ್ರದರ್ಶನ ನೋಡಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಬೆರಗಾದರು. ಕ್ರೀಡಾಂಗಣದಲ್ಲಿ ಸಂಸದ ಧರಂಸಿಂಗ್, ಶಾಸಕರಾದ ರಹೀಮ್ಖಾನ, ಬಂಡೆಪ್ಪ ಖಾಶೆಂಪೂರ, ರಘುನಾಥರಾವ ಮಲ್ಕಾಪೂರೆ, ದೀಪಿಕಾ ರಾಠೋಡ, ಲತಾ ಹಾರಕೂಡೆ, ಜಿಲ್ಲಾಧಿಕಾರಿ ಡಾ. ಪಿಸಿ ಜಾಫರ್, ಎಸ್ಪಿ. ಡಾ. ಕೆ ತ್ಯಾಗರಾಜನ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!