ಬೀದರ್

ಜನಪದ ಜಾಗೃತಿ ಜಾಥಾ ಕರ್ಯಾಕ್ರಮ

ಬೀದರ್: ಹುಮನಾಬಾದ್ ತಾಲೂಕಿನ ಉಡಬಾಳ ಗ್ರಾಮದಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಜಾನಪದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಹಿರಿಯ ಕಲಾವಿದ ದೇವಿದಾಸ್ ಚಿಮಕೋಡ್ ನೇತೃತ್ವದ ಕಲಾ ತಂಡವು, ರಾಷ್ಟ್ರೀಯ ಭಾವೈಕತೆ, ಕೋಮು ಸೌಹಾರ್ದತೆ, ಸಾಮಾಜಿಕ ಸಾಮರಸ್ಯ, ಭಾರತ ನಿರ್ಮಾಣ, ಉದ್ಯೋಗ ಖಾತ್ರಿ ಯೋಜನೆಗಳ ಕುರಿತು ಅಭಿನಯ, ಜಾನಪದ ಹಾಡುಗಳ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು. ಗ್ರಾಪಂ ಅಧ್ಯಕ್ಷ ಗೋವಿಂದರಾವ ಭಂಗಿ, ತೀರ್ಥಯ್ಯ ಸ್ವಾಮಿ, ಬಸವರಾಜ, ಕುಪೇಂದ್ರ ಕಾಂಬಳೆ, ಸಜ್ಜನಶೆಟ್ಟಿ, ಅಮೃತರಾವ ಕಾಂಬಳೆ, ಮಹಿಳಾ ಸಂಘದ ಪ್ರತಿನಿಧಿಗಳು ಇದ್ದರು.
ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ
ಹುಮನಾಬಾದ್: ತಾಲೂಕಿನ ಪಂಚಾಕ್ಷರಿ ಶಾಲೆಯಲ್ಲಿ ಶಂಕರ ಭಯ್ಯಾ ಅಧ್ಯಕ್ಷತೆಯಲ್ಲಿ ಚಿಟಗುಪ್ಪ ಪಂಚಾಕ್ಷರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಅದ್ಧೂರಿಯಾಗಿ ಜರುಗಿತು. ಮುಖ್ಯ ಅತಿಥಿಯಾಗಿ ಚಿಟಗುಪ್ಪ ಸಿಪಿಐ ಶಿವಾನಂದ ಪವಾಡಶೆಟ್ಟಿ ಹಾಗೂ ಹುಮನಾಬಾದ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವೈಆರ್. ನಂದಿಹಳ್ಳಿ ಪುರಸಭೆ ಮುಖ್ಯ ಅಧಿಕಾರಿ ಶಂಭುಲಿಂಗ ದೇಸಾಯಿ ಸದಸ್ಯ ಮನೋಜಕುಮಾರ ಶರ್ಮಾ ಪಾಲ್ಗೊಂಡಿದ್ದರು. ನಿವೃತ್ತ ವೈದ್ಯಾಧಿಕಾರಿ ಡಾ. ರಾಜನ್ ಉದ್ಘಾಟಿಸಿದರು. ಮುಖ್ಯಗುರು ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿ ಸಂಸ್ಥೆ ಅಧ್ಯಕ್ಷ ಮಂಗಲಾ ಭಯ್ಯಾ, ಆಡಳಿತಾಧಿಕಾರಿ ಎಸ್.ಬಿ. ಕುಚಬಾಳ ಸಂಸ್ಥೆ ವಿವರ ನೀಡಿ ವಂದಿಸಿದರು.
ಕುಲಕರ್ಣಿಗೆ ಜೆಡಿಎಸ್ ಟಿಕೆಟ್ ನೀಡಿ
ಬೀದರ್: ಹುಮನಾಬಾದಿನ ನ್ಯಾಯವಾದಿ ಎಎಂ ಕುಲಕರ್ಣಿ ಅವರಿಗೆ ಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಆಗ್ರಹಿಸಿದೆ. ಈ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೆಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೆ ಸಮಾಜದ ವಿವಿಧ ಪ್ರಮುಖರು ಮನವಿ ಸಲ್ಲಿಸಿ ಎಎಂ ಕುಲಕರ್ಣಿ ನ್ಯಾಯವಾದಿಗಳ ಜೊತೆಗೆ ತಾಲೂಕಿನಲ್ಲಿಯೇ ಜನಪ್ರಿಯರಾಗಿ ಜನಹಿತ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಕಳೆದ 25 ವರ್ಷಗಳಿಂದ ಪಕ್ಷದ ನಿಷ್ಠಾವಂತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಾಲೂಕಿನಲ್ಲಿಯೇ ಸರ್ವಧರ್ಮ ಸಮಾನತೆವುಳ್ಳವರಾಗಿದ್ದರಿಂದ ಇವರಿಗೆ ಪಕ್ಷದ ಅಭ್ಯರ್ಥಿಯನ್ನಾಗಿಸಬೇಕೆಂದು ಸಮಾಜದ ಮನೋಹರ ಕುಲಕರ್ಣಿ, ವೆಂಕಟರಾವ್ ಕುಲಕರ್ಣಿ, ವಿನಾಯಕ ದೇಶಪಾಂಡೆ, ಗೋಪಾಲರಾವ್ ಕುಲಕರ್ಣಿ, ಋಷಿಕೇಶ, ಪಾಂಡುರಂಗರಾವ, ರಾಮರಾವ್ ಕುಲ್ಕರ್ಣಿ ಇತರರು ಮನವಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!