ಹುಣಸಗಿ: ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೋಮವಾರ ಮಧ್ಯಾಹ್ನ ಯಾದಗಿರಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ್ ಕೆಂಭಾವಿ ದಿಢಿರ್ ಭೇಟಿ ನೀಡಿದರು. ಶಾಲಾ ಪರಿಸರ, ದಾಖಲೆ, ಮಕ್ಕಳ ಕುಂದುಕೊರತೆಗಳನ್ನು ಸಹಾನುಭೂತಿಯಿಂದ ಆಲಿಸಿದರು. ಶಾಲೆಯಲ್ಲಿ ಮಕ್ಕಳೊಂದಿಗೆ ಊಟ ಮಾಡಿದರು. ವಿದ್ಯಾರ್ಥಿಗಳು ಶಾಲೆಯ ವ್ಯವಸ್ಥೆಯ ಬಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷರು ಪ್ರಾಚಾರ್ಯರಿಗೆ ವಿದ್ಯಾರ್ಥಿಗಳ ತೊಂದರೆ ಕುರಿತು ಹೇಳಿ, ಅದನ್ನು ಸರಿಪಡಿಸಲು ಆದೇಶಿಸಿದರು.ಶಾಲಾ ಭೇಟಿ ನಂತರ ಸಿದ್ದನಗೌಡ ಪಾಟೀಲ್ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ಪರಿಶೀಲನೆ ಮಾಡಿದರು. ವೈದ್ಯಾಧಿಕಾರಿ ಡಾ.ಎಸ್.ಬಿ.ಪಾಟೀಲ್ ಹಾಗೂ ಇತರರು ಇದ್ದರು.