ಬೀದರ್

ನ್ಯಾಯಾಲಯ ಕಟ್ಟಡ ಉದ್ಘಾಟನೆ ನಾಳೆ

ಬೀದರ್: ಜಿಲ್ಲಾ ನ್ಯಾಯಾಂಗ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಭಾಲ್ಕಿ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಜು.26ರಂದು ಮಧ್ಯಾಹ್ನ 12.30ಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರ ಮತ್ತು ಜೆಎಂಎಫ್ಸಿ ಕೋರ್ಟ್ನ ಕಟ್ಟಡದ ಉದ್ಘಾಟನೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾ. ಎನ್.ಕೆ. ಪಾಟೀಲ್ ನೆರವೇರಿಸುವರು. ಬೀದರ್ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಬಿ. ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸುವರು. ಸಂಸದ ಭಗವಂತ ಖೂಬಾ ಹಾಗೂ ಶಾಸಕ ಈಶ್ವರ ಖಂಡ್ರೆ ಅತಿಥಿಯಾಗಿ ಭಾಗವಹಿಸುವರು. ಅದೇ ದಿನ ಮಧ್ಯಾಹ್ನ 3.30ಕ್ಕೆ ಹುಮನಾಬಾದ್ನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಕಟ್ಟಡವನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎನ್.ಕೆ. ಪಾಟೀಲ್ ಉದ್ಘಾಟಿಸುವರು. ನ್ಯಾಯಮೂರ್ತಿ ಬಿ. ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಭಗವಂತ ಖೂಬಾ ಹಾಗೂ ಶಾಸಕ ರಾಜಶೇಖರ ಪಾಟೀಲ್ ಪಾಲ್ಗೊಳ್ಳುವರು.
ಕೃಷಿ ಜಮೀನಿನ ನೂತನ ಮಾರುಕಟ್ಟೆ ದರ ಪ್ರಕಟ
ಔರಾದ್: ತಾಲೂಕಿನ ಕೃಷಿ ಜಮೀನು, ನಿವೇಶನ ವಾಣಿಜ್ಯ ಸ್ವತ್ತುಗಳ ಮಾರ್ಗದರ್ಶಿ ಮಾರುಕಟ್ಟೆ ನೂತನ ದರವನ್ನು ಪರಿಷ್ಕರಿಸಿ ಪ್ರಕಟಿಸಲಾಗಿದೆ. 2014-15ನೇ ಸಾಲಿಗೆ ಅನ್ವಯವಾಗುವಂತೆ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ಎರಡು ವಾರಗಳ ಕಾಲಾವಧಿ ನಿಗದಿಪಡಿಸಲಾಗಿದೆ ಎಂದು ಉಪ ನೋಂದಣಾಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು ಕೃಷಿ ಜಮೀನು, ನಿವೇಶನ, ವಾಣಿಜ್ಯ ಸ್ವತ್ತುಗಳ ಮಾರ್ಗದರ್ಶಿ ಮಾರುಕಟ್ಟೆ ನೂತನ ದರವನ್ನು ಪರಿಷ್ಕರಿಸಿ ಪ್ರಕಟಿಸಲಾಗಿದ್ದು, ಎರಡು ವಾರದ ಒಳಗಾಗಿ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು ಸಲಹೆ ದೂರುಗಳನ್ನು (ಸಬ್ ರಿಜಿಸ್ಟರ್) ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ ಎಂದು ಉಪ ನೋಂದಣಾಧಿಕಾರಿ ಚಂದ್ರಕಾಂತ ಶಿಕಾರಿ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಸೈನಿಕ ಭರ್ತಿ ರ್ಯಾಲಿ
ಬೀದರ್: ಬೆಳಗಾವಿಯ ಸೈನಿಕ್ ಕಚೇರಿಯು ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್ ಸೋಲ್ಜರ್ ಡ್ರೆಸ್ಸರ್, ಸೋಲ್ಜರ್ ಕ್ಲರ್ಕ್ ಸೋಲ್ಜರ್ ಸ್ಟೋರ್ ಕೀಪರ್, ಸೋಲ್ಜರ್ ಜನರಲ್ ಡ್ಯುಟಿ, ಸೋಲ್ಜರ್ ಟ್ರೇಡ್ಸ್ಮೆನ್ ಹಾಗೂ ಡಿಫೆನ್ಸ್ ಸೆಕ್ಯೂರಿಟಿ ಕಾಪ್ಸರ್ ಹುದ್ದೆಗಳ ಭರ್ತಿಗಾಗಿ ಆ.18ರಿಂದ 23ರ ವರೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಸೈನಿಕ ಭರ್ತಿ ರ್ಯಾಲಿ ಹಮ್ಮಿಕೊಂಡಿದೆ. ಬೀದರ್, ಗುಲ್ಬರ್ಗ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಬಹುದು ಎಂದು ಬೆಳಗಾವಿಯ ಸೈನಿಕ ನೇಮಕಾತಿ ಕಚೇರಿ ತಿಳಿಸಿದೆ.
ಗೌರವಧನ ಪ್ರಶಸ್ತಿಗೆ ಪುಸ್ತಕ ಆಹ್ವಾನ
ಬೀದರ್: ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಗುಲ್ಬರ್ಗ, ಯಾದಗಿರಿ, ಬೀದರ್ ಹಾಗೂ ರಾಯಚೂರು ಜಿಲ್ಲೆಯ ಪುಸ್ತಕ ಲೇಖಕರಿಗೆ ಗೌರವಧನ ಪ್ರಶಸ್ತಿ ನೀಡಲು ಗುಲ್ಬರ್ಗ ವಿಶ್ವವಿದ್ಯಾಲಯ ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ. ಗೌರವಧನ ಆಪೇಕ್ಷಿಸುವ ಲೇಖಕರು 2013ರ ಜನವರಿಯಿಂದ ಡಿಸೆಂಬರ್ 31ರ ಅವಧಿಯೊಳಗೆ ಪ್ರಕಟವಾದ ಪುಸ್ತಕದ 4 ಪ್ರತಿಗಳನ್ನು ಆ.20ರ ರೊಳಗೆ ನಿರ್ದೇಶಕರು, ಪ್ರಸಾರಾಂಗ ಗುಲ್ಬರ್ಗ ವಿವಿ, ಗುಲ್ಬರ್ಗ-6 ವಿಳಾಸಕ್ಕೆ ನೋಂದಾಯಿತ ಅಂಚೆಯ ಮೂಲಕ ಇಲ್ಲವೇ ಖುದ್ದಾಗಿ ಬಂದು ತಲುಪಿಸಬೇಕು. ವಿವರಕ್ಕೆ ಮೊ.  99026 01519.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!