ಬೀದರ್

ಅದಾಲತ್‌ನಲ್ಲಿ 2119 ಪ್ರಕರಣ ಇತ್ಯರ್ಥ

ಬೀದರ್: ನಗರದಲ್ಲಿ ನಡೆಸಿದ ಲೋಕ ಅದಾಲತ್‌ನಲ್ಲಿ 2119 ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಂಚಾಟೆ ಸಂಜೀವಕುಮಾರ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಲೋಕ ಅದಾಲತ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲೋಕ ಅದಾಲತ್ ತ್ವರಿತವಾಗಿ ನ್ಯಾಯ ದೊರಕಿಸಿಕೊಡುವ ಪರಿಣಾಮಕಾರಿ ವ್ಯವಸ್ಥೆಯಾಗಿದ್ದು, ಸಂವಿಧಾನಬದ್ಧ ಮತ್ತು ನ್ಯಾಯಬದ್ಧ ಹಕ್ಕುಗಳಿಂದ ವಂಚಿತರಾದವರು ಜಿಲ್ಲಾ ಅಥವಾ ಆಯಾ ತಾಲೂಕಿನ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಪಡೆಬಹುದಾಗಿದೆ ಎಂದರು.
ಆರ್ಥಿಕತೆ ಮುಖ್ಯ: ಸಂಧಾನದ ಮೂಲಕ ಇತ್ಯರ್ಥಗೊಂಡ ಸಾಲದ ಮರುಪಾವತಿ 13.42 ಕೋಟಿಗಳಾಗಿದ್ದು, ಮೂರು ದಿನದಲ್ಲಿ ರೈತರು ಹಣ 97 ಲಕ್ಷ ಮರುಪಾವತಿಸಿದ್ದಾರೆ. ದೇಶ ಎಲ್ಲ ಕ್ಷೇತ್ರಗಳಲ್ಲೂ ಬಲಿಷ್ಠವಾಗಲು ಆರ್ಥಿಕತೆ ಬಹುಮುಖ್ಯ ಪಾತ್ರವಹಿಸುತ್ತದೆ. ಬ್ಯಾಂಕಿಂಗ್ ಕ್ಷೇತ್ರದ ಮೂಲಕ ಬಲಿಷ್ಠ ಆರ್ಥಿಕತೆ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಆರ್. ರಾಜಾಸೋಮಶೇಖರ್ ಮಾತನಾಡಿ, ವಕೀಲರು ಹಾಗೂ ರೈತರು ಸ್ವಯಂ ಪ್ರೇರಣೆಯಿಂದ ಬಹುದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಬೃಹತ್ ಲೋಕ ಅದಾಲತ್ ಯಶಸ್ಸಿಗೆ ಕಾರಣಿರಾಗಿದ್ದಾರೆ ಎಂದರು.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಮಹಾ ಪ್ರಬಂಧಕ ಸುಧೀಂದ್ರ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ. ಕಾಶಿನಾಥ, ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಡಿ.ವಿ. ದೇಶಮುಖ, ವಕೀಲರಾದ ವಿಲಾಸರಾವ್ ಮೋರೆ, ಅನಿಲ್‌ಕುಮಾರ ಕರಂಜೆ, ಕೀರ್ತಿ ಮತ್ತು ಇತರೆ ವಕೀಲರು ಮಾತನಾಡಿದರು.
ಅಪರ ಹಿರಿಯ ಸಿವಿಲ್ ನ್ಯಾ. ಸೋಮಶೇಖರ ಬಾದಾಮಿ ಮತ್ತು ಮಧ್ಯಸ್ಥಿಕೆಗಾರರಾದ ಎಲ್ಲಾ ವಕೀಲರು ಹಾಜರಿದ್ದರು. ಜಿಲ್ಲಾ ವಕೀಲರ ಸಂಘ ಹಾಗೂ ಬಾಲ ನ್ಯಾಯಾಲಯದ ಸದಸ್ಯ ಬಿ.ಎಸ್. ಪಾಟೀಲ ನಿರೂಪಿಸಿದರು.

ಸಂಧಾನದ ಮೂಲಕ ಇತ್ಯರ್ಥಗೊಂಡ ಸಾಲದ ಮರುಪಾವತಿ 13.42 ಕೋಟಿಗಳಾಗಿದ್ದು, ಮೂರು ದಿನದಲ್ಲಿ ರೈತರು ಹಣ 97 ಲಕ್ಷ ಮರುಪಾವತಿಸಿದ್ದಾರೆ. ದೇಶ ಎಲ್ಲ ಕ್ಷೇತ್ರಗಳಲ್ಲೂ ಬಲಿಷ್ಠವಾಗಲು ಆರ್ಥಿಕತೆ ಬಹುಮುಖ್ಯ ಪಾತ್ರವಹಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!