ಬೀದರ್

ಜೈಲಲ್ಲೇ ನಿಲ್ಲುತ್ತೆ ಕಾಮುಕರ ಉಸಿರು!

ಮಗುವಿನ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಜೀವಿತಾವಧಿ ಜೈಲು...

ಬೀದರ್: ಮಗುವಿನ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ ಜೀವಿತಾವಧಿ ಜೈಲು ಶಿಕ್ಷೆ ರು.40 ಸಾವಿರ ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಂಜೀವ ಕುಮಾರ ಹಂಚಾಟೆ ಗುರುವಾರ ಮಹತ್ವದ ತೀರ್ಪು ನೀಡಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಪೋಕ್ಸೊ ಕಾಯ್ದೆಯಡಿ ಘೋಷಿಸಿದ ಸಜೆಯಿದು.

ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್ ಸಮೀಪದ ಮೋನಾ ಶಂಕರ್ ತಾಂಡಾ ನಿವಾಸಿ ಸೋಪಾನ್ ಪೋಮಾ ರಾಠೋಡ್ ಶಿಕ್ಷೆಗೆ ಗುರಿಯಾದವನು. ಪೋಕ್ಸೊ ಕಾಯ್ದೆಯ ಸೆಕ್ಷನ್ 4 ಮತ್ತು 6 ಅಡಿಯಲ್ಲಿ ಪ್ರತ್ಯೇಕವಾಗಿ ತಪ್ಪಿತಸ್ಥ ಸೋಪಾನ್ ದೇಹದಲ್ಲಿ ಕೊನೆಯುಸಿರು ಇರುವವರೆಗೆ ಜೈಲು ಶಿಕ್ಷೆ ಅನುಭವಿಸಬೇಕು.

ಘಟನೆ ಹಿನ್ನೆಲೆ: ಏಳು ವರ್ಷದ ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದನ್ನು ಅರಿತ ಕಾಮುಕ, ಕುರಿ ಕಾಯಲು ತೆರಳೋಣವೆಂದು ಪುಸಲಾಯಿಸಿ 2013, ಅ.31ರಂದು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ನ್ಯಾ. ಹಂಚಾಟೆ ಅವರು ಆರೋಪಿ ಸೋಪಾನ್‌ನನ್ನು ತಪ್ಪಿತಸ್ಥನೆಂದು ಗುರುತಿಸಿ ತೀರ್ಪಿತ್ತಿದ್ದಾರೆ. ರಾಮಚಂದ್ರ ಲಮಾಣಿ ಬಾಲಕಿಯ ಕುಟುಂಬದವರ ಪರವಾಗಿ ವಾದಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

“ಜನರಿಗೆ ದ್ರೋಹ ಮಾಡುವುದೇ ಕಾಂಗ್ರೆಸ್ ಕೆಲಸ”, ಜನರ ಸಮಸ್ಯೆಗಿಂತ ಅಧಿಕಾರದ ಜಗಳವೇ ಮುಖ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

“ನನ್ನ ಹೃದಯದಲ್ಲಿ ನೆಲೆಸಿರುವ ಪ್ರೀತಿಯ ಜನರೇ…”: ಭಾವನಾತ್ಮಕ ಭಾಷಣದೊಂದಿಗೆ ಆಡಳಿತ ಆರಂಭಿಸಿದ ಸಿಎಂ ವಿಜಯ್, ಉಚಿತ ವಿದ್ಯುತ್ ಯೋಜನೆಗೆ ಅನುಮೋದನೆ..!

ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ರಾಜ್ಯಭಾರ: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ, MGR-ಜಯಲಲಿತಾ ಬಳಿಕ CM ಗದ್ದುಗೆ ಏರಿದ ಮತ್ತೊಬ್ಬ ಸಿನಿ ದಿಗ್ಗಜ..!

Tamil Nadu swearing-in ceremony: ವಿಜಯ ಜೊತೆ 9 ಸಚಿವರು ಪ್ರಮಾಣ ವಚನ, ಚೆನ್ನೈಯಲ್ಲಿ ಕಾರ್ಯಕ್ರಮಕ್ಕೆ ಭಾರೀ ಭದ್ರತೆ-Video

D Sudhakar: ಚಿಕಿತ್ಸೆ ಫಲಕಾರಿಯಾಗದೆ ಸಚಿವ ಸುಧಾಕರ್ ನಿಧನ

SCROLL FOR NEXT