ಬಿಜಾಪುರ: ನಕ್ಸಲ್ ನಿಗ್ರಹ ಪಡೆಯ ನೈತಿಕ ಸ್ಥೈರ್ಯ ಕುಸಿತಕ್ಕೆ ಕಾರಣವಾದ ರಾಜ್ಯ ಸರ್ಕಾರದ ಬೇಜವಾಬ್ದಾರಿ ನಡೆಯನ್ನು ವಿರೋಧಿಸಿ ಮಂಗಳವಾರ ರಾಜ್ಯದ ಎಲ್ಲೆಡೆಯಂತೆ ಎಬಿವಿಪಿ ವಿದ್ಯಾರ್ಥಿಗಳು ಬಿಜಾಪುರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಎಬಿವಿಪಿ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶೃಂಗೇರಿಯ ತನಿಕೋಡು ಚೆಕ್‌ಪೋಸ್ಟ್ ಬಳಿ ಏ. 19ರಂದು ನಕ್ಸಲ್ ನಿಗ್ರಹ ಪಡೆಯವರು ನಕ್ಸಲರೆಂದು ತಿಳಿದು ದನಗಳ್ಳರ ಮೇಲೆ ನಡೆಸಿದ ಗುಂಡಿನ ದಾಳಿಯನ್ನು ಎಬಿವಿಪಿ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದಾರೆ.
ನಕ್ಸಲ್ ನಿಗ್ರಹ ಪಡೆಯ ಯೋಧ ನವೀನ್ ನಾಯ್ಕ ಅವರು ರಾಷ್ಟ್ರಪತಿ ಪದಕ ವಿಜೇತರು, ಹಲವಾರು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಹಾಗೂ ದಕ್ಷತೆಗೆ ಹೆಸರಾಗಿದ್ದರೂ ಸರ್ಕಾರದ ಈ ನಿರ್ಧಾರದಿಂದಾಗಿ ಪೊಲೀಸರನ್ನು ಅವಮಾನ ಮಾಡಿದೆ ಎಂದು ರಾಜ್ಯ ಕಾರ್ಯದರ್ಶಿ ಟಿ.ಎಸ್. ಸುನೀಲ ಪ್ರಸಾದ ಹೇಳಿದರು.
ಭಾಗ್ಯಾ ಮೂಲಿಮನಿ, ಪರಿಮಳಾ ಕಾಂಬಳೆ, ಆನಂದ ಚವ್ಹಾಣ, ಚೇತನ ಮಠ, ವೀರೇಶ ಹಿರೇಮಠ ಇದ್ದರು.