ಬಿಜಾಪುರ: ಡಾ.ಎಂ.ಎಂ. ಕಲ್ಬುರ್ಗಿ ಅವರ ವಿರುದ್ಧ ಬಿಜಾಪುರದ 1ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಗುರುವಾರ ದೂರು ದಾಖಲಾಗಿದೆ. ಡಾ. ಕಲ್ಬುರ್ಗಿ, ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಅಪರಾಧಿಕ ಕೃತ್ಯ ಎಸಗಿದ ಹಿನ್ನೆಲೆಯಲ್ಲಿ ಕುಮಾರ ಹನುಮಂತ ನಿಡೋಣಿ ಎಂಬುವರು ಐಪಿಸಿ 295, 295ಎ ಹಾಗೂ 298 ಕಲಂ ಅಡಿ ದೂರು ದಾಖಲಿಸಿದ್ದಾರೆ ಎಂದು ನ್ಯಾಯವಾದಿ ಶ್ರೀನಿವಾಸ ಕೊಂಡಗೂಳಿ ಅವರು ತಿಳಿಸಿದ್ದಾರೆ.