ಕ.ಪ್ರ.ವಾರ್ತೆ ಚಾ.ನಗರ ಡಿ. 2
ಈ ವರ್ಷದ ವಿಶ್ವ ಏಡ್ಸ್ ದಿನಾಚರಣೆಯ ದ್ಯೇಯ ವಾಕ್ಯವಾದ ಸೊನ್ನೆಗೆ ತನ್ನಿ ಯಶಸ್ವಿಯಾಗಬೇಕಾದರೆ 18 ರಿಂದ 35 ವರ್ಷದೊಳಗಿನ ಯುವಕರ ಪಾತ್ರ ಬಹಳ ಮಹತ್ವವಾದದ್ದು, ಈ ನಿಟ್ಟಿನಲ್ಲಿ ಏಡ್ಸ್ ಹಾಗೂ ಎಚ್ಐವಿ ಸೋಂಕಿನ ಬಗ್ಗೆ ಯುವ ಸಮೂಹಕ್ಕೆ ಹೆಚ್ಚಿನ ಅರಿವು ಮೂಡಿಸಿ, ಏಡ್ಸ್ ನಿಯಂತ್ರಣದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಆಶ್ರಯಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಮಾತನಾಡಿದರು.
1986ರಲ್ಲಿ ದಕ್ಷಿಣ ಆಪ್ರಿಕಾದ ಕಿನ್ಯಾದಲ್ಲಿ ಕಾಣಿಸಿಕೊಂಡ ಈ ರೋಗಕ್ಕೆ ಇನ್ನು ಸಮರ್ಪಕ ಔಷಧಿ ಕಂಡುಹಿಡಿಯಲಾಗಿಲ್ಲ. ಇದಕ್ಕಾಗಿ ಹಲವಾರು ಸಂಶೋಧನೆಗಳು ನಡೆಯುತ್ತಿದ್ದು, ಮುಂದೊಂದು ದಿನ, ಈ ಏಡ್ಸ್ ಕಾಯಿಲೆಗೆ ಗುಣಕ್ಕೆ ಔಷಧ ಬರಬಹುದು. ಅಲ್ಲಿವರೆಗೆ ಈ ಕಾಯಿಲೆಯನ್ನು ನಿಯಂತ್ರಿಸಲು ಯುವ ಸಮೂಹಕ್ಕೆ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕಾಗಿದೆ ಎಂದರು.
ನಿಯಂತ್ರಣದಲ್ಲಿ ಮುಂದು: ಹೆಚ್ಚು ಎಚ್ಐವಿ ಸೋಂಕಿತರಿರುವ ರಾಜ್ಯದ ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ಏಡ್ಸ್ ಹಾಗೂ ಎಚ್ಐವಿ ನಿಯಂತ್ರಣದಲ್ಲಿ ಜಿಲ್ಲೆ ಮುಂದೆ ಇರುವುದು ಹೆಮ್ಮೆ ಸಂಗತಿ. ಕಳೆದ ವರ್ಷ 1.66 ಇದ್ದ ಪ್ರಮಾಣ ಈ ವರ್ಷ 0.6 ಕ್ಕೆ ಇಳಿದಿದ್ದು, ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆದಿರುವುದೇ ಸಾಕ್ಷಿ, ಇದು ಸೊನ್ನೆಗೆ ಬರಬೇಕಾದರೆ ಮತ್ತಷ್ಟು ಅರಿವು, ಜಾಗೃತಾ ಜಾಥಾಗಳು ನಡೆಯುವಂತಾಗಬೇಕು, ಅದರಲ್ಲೂ ಯುವಕರಿಗೆ ಇದರ ಬಗ್ಗೆ ಹೆಚ್ಚು ತಿಳಿವಳಿಕೆ ಮೂಡಿಸುವುದು ಅಗತ್ಯ ಎಂದರು.
ಎಚ್ಐವಿ ಸೋಂಕಿತರ ಕೈಕುಲುಕುವುದರಿಂದಾಗಲಿ, ಜೊತೆಯಲ್ಲಿ ಊಟ ಮಾಡುವುದರಿಂದಾಗಲಿ ಅಥವಾ ಅವರನ್ನು ಮಾತನಾಡಿಸುವುದರಿಂದಾಗಲಿ ಈ ಕಾಯಿಲೆ ಬರುವುದಿಲ್ಲ, ಆದ್ಗರಿಂದ ಅಂತಹರನ್ನು ಪ್ರೀತಿಯಿಂದ ಕಾಣಿರಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ, ಸೋಂಕಿತರು ಸಹ ತಮ್ಮ ಮನಸ್ಸಿನಲ್ಲೇ ಕೊರಗದೇ ಎಆರ್ಟಿ ಕೇಂದ್ರಗಳಿಗೆ ಬಂದು, ಆಪ್ತ ಸಮಾಲೋತಕರೊಡನೆ ಚರ್ಚಿಸಿ, ಔಷಧಿಗಳನ್ನು ತೆಗೆದುಕೊಳ್ಲಿ, ಮತ್ತಷ್ಟು ವರ್ಷ ಬದುಕಬಹುದು, ಸಂಕೋಚ ಬೇಡ ಎಂದರು.
ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 500 ಜನ ಏಡ್ಸ್ ರೋಗಿಗಳು, 2200 ಮಂದಿ ಎಚ್ಐವಿ ಸೋಂಕಿತರು ಇದ್ದಾರೆ. ಸರ್ಕಾರ ಇವರಿಗೆ ಹಲವಾರು ಸೌಲಭ್ಯಗಳನ್ನು ನೀಡಿದೆ. ಎಆರ್ಟಿ ಕೇಂದ್ರಗಳ ಮೂಲಕ ಉಚಿತ ಔಷಧಿ, ಚಿಕಿತ್ಸೆ ಇದೆ, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಜಿ.ಪಂ.ಅಧ್ಯಕ್ಷೆ ಯಶೋಧ ಪ್ರಭುಸ್ವಾಮಿ ಮಾತನಾಡಿ, ಏಡ್ಸ್ ಹಾಗೂ ಎಚ್ಐವಿ ಸೋಂಕಿನ ಬಗ್ಗೆ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು, ಎಚ್ಐವಿ ಸೋಂಕಿತರನ್ನು ಪ್ರೀತಿಯಿಂದ ಕಂಡು, ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು, ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವಂತಾಗಬೇಕು ಎಂದರು.
ಪ್ರತಿಜ್ಞಾವಿಧಿ: ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ನಾನು ಇಂದು ವಿಶ್ವ ಏಡ್ಸ್ ದಿನ 2013ರ ಸಂದರ್ಭದಲ್ಲಿ ಪ್ರಮಾಣ ಮಾಡುವುದೇನೆಂದರೆ, ನನಗೆ ಎಚ್ಐವಿ, ಏಡ್ಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತೆ ವಹಿಸುತ್ತೇನೆ. ಯುವಜನರು, ಮಹಿಳೆಯರು, ಮಕ್ಕಳು ಹಾಗೂ ಇತರರಿಗೆ ಎಚ್ಐವಿ, ಏಡ್ಸ್ ಹರಡಂತೆ ಮುಂಜಾಗ್ರತೆ ವಹಿಸಲು ಮಾಹಿತಿ ಮತ್ತು ಅರಿವು ಮೂಡಿಸುತ್ತೇನೆ, ಎಚ್ಐವಿಯೊಂದಿಗೆ ಜೀವಿಸುತ್ತಿರುವವರಿಗೆ ನನ್ನಿಂದ ಯಾವುದೇ ರೀತಿಯ ಕಳಂಕ ಮತ್ತು ತಾರತಮ್ಯ ಆಗದಂತೆ ನಡೆದುಕೊಳ್ಳುತ್ತೇನೆ ಹಾಗೂ ಮಾನವ ಹಕ್ಕುಗಳ ರಕ್ಷಣೆ ಮಾಡುತ್ತೇನೆಂದು ಈ ಮೂಲಕ ಪ್ರಮಾಣ ಮಾಡುತ್ತಿದ್ದೇನೆ ಎಂಬ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ನರಸಿಂಹಮೂರ್ತಿ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಂಡು ವಿಜಯನ್ ಮಾತನಾಡಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಗಿರಿಜಾಂಬ ಪ್ರಾಸ್ತಾವಿಸಿ, ಸ್ವಾಗತಿಸಿದರು.
ಜಾಗೃತಿ ಜಾಥಾ
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಏಡ್ಸ್ಜಾಗೃತಿ ಜಾಥಾಕ್ಕೆ ಜಿ.ಪಂ ಅಧ್ಯಕ್ಷೆ ಯಶೋಧ ಪ್ರಭುಸ್ವಾಮಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕುಂಜಪ್ಪ, .ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ನರಸಿಂಹಮೂರ್ತಿ, ನಗರಸಭಾ ಅಧ್ಯಕ್ಷ ನಂಜುಂಡಸ್ಲಾಮಿ, ಜಿಲ್ಲಾ ಏಡಡ್ಸ್ನಿಯಂತ್ರಣಾಧಿಕಾರಿ ಗಿರಿಜಾಂಬ, ತಾಲೂಕು ಆರೋಗ್ಯಾಧಿಕಾರಿ ಡಾ.ಮಲ್ಲಿಕಾ, ಮತ್ತಿತರರು ಇದ್ದರು.ಕಲಾ ತಂಡಗಳ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ಏಡ್ಸ್ಮ್ತ್ತು ಎಚ್ಐವಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಕಿರು ನಾಟಕಗಳನ್ನು ಪ್ರದರ್ಶಿಸಿ, ಜನರಲ್ಲಿ ಅರಿವು ಮೂಡಿಸಲಾಯಿತು. ಜಾಥಾದಲ್ಲಿ ಸರ್ಕಾರಿ ನರ್ಸಿಂಗ್, ಜೆಎಸ್ಎಸ್ನ್ಸಿಂರ್ಗ್, ಮನೋನಿಧಿ ನಸಿಂರ್ಗ್ ್ಶಾಲೆಯ ವಿದ್ಯಾರ್ಥಿಗಳು, ಪ್ರಾಚಾರ್ಯರು, ಉಪನ್ಯಾಸಕರುಗಳು ಭಾಗವಹಿಸಿದ್ದರು.