ಚಾಮರಾಜನಗರ

ಪದಾಧಿಕಾರಿಗಳ ಆಯ್ಕೆ



ಚಾಮರಾಜನಗರ: ಬಡ ಮಕ್ಕಳಿಗೆ ಶಿಕ್ಷಣ, ರೈತರು, ವಯೋವೃದ್ಧರಿಗೆ ಸರ್ಕಾರದ ವತಿಯಿಂದ ದೊರೆಯುವ ಸವಲತ್ತು ಕೊಡಿಸುವ ಮೂಲಕ ಕನ್ನಡ ನೆಲ, ಜಲ, ಭಾಷೆಗೆ ಅನ್ಯಾಯವಾದಾಗ ಹೋರಾಟ ಮಾಡುವುದು ವೇದಿಕೆ ಉದ್ದೇಶವಾಗಿದೆ ಎಂದು ಕಸ್ತೂರಿ ಕರ್ನಾಟಕ ವೇದಿಕೆ ಗೌರವಾಧ್ಯಕ್ಷ ವಕೀಲ ಎಂ.ಚಿನ್ನಸ್ವಾಮಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕಾತಿ ಸಭೆಯಲ್ಲಿ ಮಾತನಾಡಿ, ಈ ವೇದಿಕೆ ಸ್ಥಾಪನೆಯಲ್ಲಿ ಯಾವುದೇ ರಾಜಕೀಯವಿಲ್ಲ. ಸೇವಾ ಭಾವನೆಯುಳ್ಳವರು ವೇದಿಕೆಗೆ ಸೇರಿಕೊಳ್ಳಬಹುದಾಗಿದ್ದು, ರಾಜ್ಯದಲ್ಲಿ ವೇದಿಕೆ ಉತ್ತಮ ಹೆಸರು ತರುವ ರೀತಿಯಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ. ಈ ಉದ್ದೇಶಕ್ಕಾಗಿಯೇ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ವೇದಿಕೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ ಎಂದರು.
ಪದಾಧಿಕಾರಿಗಳ ನೇಮಕ: ವಕೀಲ ಎಂ. ಚಿನ್ನಸ್ವಾಮಿ(ಗೌರವಾಧ್ಯಕ್ಷ), ಎಂ.ನಾಗಬಸವಣ್ಣ(ಅಧ್ಯಕ್ಷ), ಯರಗಂಬಳ್ಳಿಮಲ್ಲು(ಕಾರ್ಯಾಧ್ಯಕ್ಷ), ಎಂ.ಮಹದೇವಸ್ವಾಮಿ(ಪ್ರಧಾನ ಕಾರ್ಯದರ್ಶಿ), ಬಿ.ಸಿದ್ದರಾಜು(ಸಂಘಟನಾ ಕಾರ್ಯದರ್ಶಿ), ಪುಟ್ಟಸ್ವಾಮಿ(ಕಾನೂನು ಸಲಹೆಗಾರ), ಬೂದಿತಿಟ್ಟು ಲಿಂಗರಾಜು, ಕೆ.ಕೆ.ಹುಂಡಿ ನಾಗರಾಜು(ಉಪಾಧ್ಯಕ್ಷ), ಗುರುಸಿದ್ದಯ್ಯ(ಖಜಾಂಚಿ), ಸ್ವಾಮಿ, ಶಿವಣ್ಣ, ಪಳನಿಸ್ವಾಮಿ ಶಂಕರ್ (ಕಾರ್ಯಕಾರಿಣಿ ಸಮಿತಿ ಸದಸ್ಯರು) ನೇಮಕಗೊಂಡರು. ಸಭೆಯಲ್ಲಿ ಆಲೂರು ನಾಗೇಶ್, ಚೆನ್ನಂಜಯ್ಯ, ಮಹದೇವಯ್ಯ, ಶಿವಣ್ಣ ಇದ್ದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!