ಚಾಮರಾಜನಗರ

ಯಳಂದೂರಲ್ಲಿ ಮಲ ಹೊತ್ತ ಕಾರ್ಮಿಕರು!

 ಅಂಬಳೆ ವೀರಭದ್ರನಾಯಕ
ಯಳಂದೂರು: ಯಳಂದೂರು ಪಟ್ಟಣ ಪಂಚಾಯ್ತಿಗೆ ಕಾನೂನಿನ ಅರಿವು ಇಲ್ಲದಂತೆ ಭಾಸವಾಗುತ್ತಿದೆ. ಮಲಗುಂಡಿಯನ್ನು ಸ್ವಚ್ಛಗೊಳಿಸಲು ಮಾನವರನ್ನು ಬಳಸಬಾರದು ಎಂಬ ಸ್ಪಷ್ಟ ಕಾನೂನಿದ್ದರೂ, ಪಟ್ಟಣ ಪಂಚಾಯ್ತಿ ಮಾತ್ರ ಮಲ ಗುಂಡಿಗಳನ್ನು ಪೌರಕಾರ್ಮಿಕರಿಂದಲೇ ಸ್ವಚ್ಛಗೊಳಿಸುತ್ತಿದೆ! ವಿಶೇಷವೆಂದರೆ ಇದಕ್ಕಾಗಿಯೇ ಸಕ್ಕಿಂಗ್ ಮಷಿನ್ ಅನ್ನೂ ಬಲಸುತ್ತಿಲ್ಲ.
ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶೌಚಾಲಯದ ಮ್ಯಾನ್ ಹೋಲ್‌ನಲ್ಲಿ ಕೊಳಕು ತುಂಬಿ ಗಬ್ಬು ನಾರುತ್ತಿತ್ತು. ಅದನ್ನು ಸ್ವಚ್ಛಗೊಳಿಸಲು ಪಟ್ಟಣ ಪಂಚಾಯಿತಿಗೆ ಸರ್ಕಾರ ಲಕ್ಷಾಂತರ ಮೌಲ್ಯದ ಮಲ ತುಂಬುವ ಯಂತ್ರ (ಸಕ್ಕಿಂಗ್ ಮಷಿನ್)ವನ್ನು ನೀಡಿದೆ. ಆದರೂ ನಿರುಪಯುಕ್ತವಾದ ಈ ಯಂತ್ರವನ್ನು ಬಳಸದೇ ಪೌರ ಕಾರ್ಮಿಕರನ್ನೇ ಗುಂಡಿಗಿಳಿಸಿ, ಮಲವನ್ನು ಬೇರೆಡೆಗೆ ಸಾಗಿಸಲಾಗಿದೆ.
ಜೈಲು ಶಿಕ್ಷೆ ದಂಡ: ಈಗಾಗಲೇ ರಾಜ್ಯದ ವಿವಿಧೆಡೆ ಮ್ಯಾನ್ ಹೋಲ್‌ಗಳನ್ನು ಸ್ವಚ್ಛಗೊಳಿಸಲು ಗುಂಡಿಗಿಳಿದ ಕಾರ್ಮಿಕರು ಉಸಿರುಕಟ್ಟಿ ಮೃತರಾಗಿರುವುದು ವರದಿಯಾಗಿದೆ. ಆದ್ದರಿಂದ ಸರ್ಕಾರ ಮ್ಯಾನ್ ಹೋಲ್ ಸ್ವಚ್ಛತಾ ಕಾರ್ಯಕ್ಕೆ ಯಂತ್ರಗಳನ್ನೇ ಬಳಸಬೇಕೆಂದು ಸ್ಥಳೀಯ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿದೆ. ಆದರೂ ಪೌರ ಕಾರ್ಮಿಕರ ಕೈಯಿಂದ ಮಲ ತುಂಬಿಸುವುದು ಮಾತ್ರ ಇನ್ನೂ ನಿಂತಿಲ್ಲ. ಗುಂಡಿಯಲ್ಲಿ ಆಕಸ್ಮಿಕವಾಗಿ ಉಸಿರುಗಟ್ಟಿ ಸಾವು ನೋವು ಸಂಭವಿಸಬಹುದು ಅಥವಾ ಅನಾರೋಗ್ಯಕ್ಕೀಡಾದರೆ ಯಾರು ಹೊಣೆಗಾರರೆಂಬ ಪ್ರಶ್ನೆ ನಾಗರಿಕರದ್ದು.
ಮಲಗುಂಡಿಯನ್ನು ಕಾರ್ಮಿಕರಿಂದ ಸ್ವಚ್ಛಗೊಳಿಸಬಾರದು ಹಾಗೂ ಮಲ ಹೊರಿಸಬಾರದು ಎಂಬ ಕೋರ್ಟ್ ಆದೇಶವಿದ್ದು, 1993ರ ಅಧಿನಿಯಮದ ಪ್ರಕಾರ 1 ರಿಂದ 2 ವರ್ಷ ಜೈಲು ಶಿಕ್ಷೆ, 50 ಸಾವಿರ-1 ಲಕ್ಷದವರೆಗೂ ದಂಡ ವಿಧಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!