ಚಾಮರಾಜನಗರ: ಕೆಜೆಪಿ ಜಿಲ್ಲಾ ಪದಾಧಿಕಾರಿಗಳ ಪಟ್ಟಿಯನ್ನು ಪಕ್ಷದ ಜಿಲ್ಲಾ ಸಂಚಾಲಕ ಕೊಡಸೋಗೆ ಶಿವಬಸಪ್ಪ ಬಿಡುಗಡೆ ಮಾಡಿದ್ದಾರೆ. ಕೆರೆಹಳ್ಳಿ ಮಹದೇವಸ್ವಾಮಿ, ಆಲೂರು ಮಲ್ಲು, ಮಹದೇವನಾಯಕ, ಕಮರಹಳ್ಳಿ ಶ್ರೀಕಂಠಪ್ಪ, ಗೋವಿಂದರಾಜು, ಕೊಳ್ಳೇಗಾಲ ಬಿ.ವೆಂಕಟರಾಮಶೆಟ್ಟಿ, ರವೀಂದ್ರ, ಹನೂರು ಜಗನ್ನಾಥ ನಾಯ್ಡು, ಮಧುವನಹಳ್ಳಿ ವಿಜಯಕುಮಾರ್(ಜಿಲ್ಲಾ ಉಪಾಧ್ಯಕ್ಷರು), ಬಸವನಪುರ ರಾಜಶೇಖರ್, ಸಿ.ಆರ್.ಮಹೇಶ್(ಪ್ರಧಾನ ಕಾರ್ಯದರ್ಶಿಗಳು), ಸಿ.ಎನ್.ವಿಜಯಕುಮಾರ್, ಅರಕಲವಾಡಿ ಗುರುಸ್ವಾಮಿ, ಕೂಡ್ಲೂರು ಗಿರೀಶ್, ಗುಂಡ್ಲುಪೇಟೆ ಮಹದೇವಶೆಟ್ಟಿ, ಟಿ.ನಾಗರಾಜು, ಕೊಳ್ಳೇಗಾಲ ಎಂ.ಎಲ್. ಬಸವಣ್ಣ, ಹನೂರು ಮಹದೇವು, ನರೀಪುರ ಎಸ್.ಸುರೇಶ್(ಕಾರ್ಯದರ್ಶಿಗಳು), ಮಂಗಲ ಕೆ.ರಾಜಶೇಖರ್(ಸಂಘಟನಾ ಕಾರ್ಯದರ್ಶಿ), ಬಿಸಲವಾಡಿ ಬಸವರಾಜು(ಯುವ ಘಟಕ ಅಧ್ಯಕ್ಷ), ಸುಧಾ ಶಿವಮಲ್ಲು(ಮಹಿಳಾ ಘಟಕದ ಅಧ್ಯಕ್ಷೆ), ಭೋಗಾಪುರ ರಾಜ್ಗೋಪಾಲ್(ಎಸ್ಸಿ ಘಟಕ), ಕಂಡಕ್ಟರ್ ಸೋಮನಾಯಕ(ಎಸ್ಟಿ ಘಟಕದ ಅಧ್ಯಕ್ಷ)ರನ್ನು ನೇಮಕ ಮಾಡಲಾಗಿದೆ. ತಾಲೂಕು ಕೆಜೆಪಿ ಅಧ್ಯಕರಾಗಿ ಕೋಡಿಮೋಳೆ ಗೋವಿಂದಶೆಟ್ಟಿ(ಚಾಮರಾಜನಗರ), ದೊಡ್ಡಹುಂಡಿ ಡಿ.ಪಿ.ಜಗದೀಶ್ (ಗುಂಡ್ಲುಪೇಟೆ), ಕೆ.ಎಸ್.ಪ್ರಭುಪ್ರಸಾದ್(ಕೊಳ್ಳೇಗಾಲ), ಕೆ.ಎಂ.ಬಸವರಾಜಪ್ಪ(ಹನೂರು) ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ರೇಷ್ಮೆ ಉದ್ಯಮ ಅಭಿವೃದ್ಧಿಗೆ ಕರೆ
ಚಾಮರಾಜನಗರ: ರೇಷ್ಮೆ ಕಾರ್ಖಾನೆಯ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸಲು ಕ್ರಮ ವಹಿಸುವುದಾಗಿ ಕೆಎಸ್ಐಸಿ ಅಧ್ಯಕ್ಷ ನೂರೊಂದು ಶೆಟ್ಟಿ ಭರವಸೆ ನೀಡಿದರು. ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ರೇಷ್ಮೆ ಕಾರ್ಖಾನೆಗೆ ಮಂಗಳವಾರ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ರೇಷ್ಮೆ ಕಾರ್ಮಿಕರಿಗೆ ಪೂರ್ಣ ಸಂಬಳ ನೀಡುತ್ತಿಲ್ಲ, ತಿಂಗಳಲ್ಲಿ 15 ದಿನಗಳು ಸರಿಯಾಗಿ ಕೆಲಸ ಇಲ್ಲ ಸೇರಿದಂತೆ ಕಾರ್ಮಿಕ ವರ್ಗದವರು ಅನುಭವಿಸುತ್ತಿರುವ ವಿವಿಧ ತೊಂದರೆಗಳನ್ನು ಗಮನಿಸಲಾಗಿದೆ. ಅಧಿಕಾರಿಗಳಿಂದ ರೇಷ್ಮೆ ಕಾರ್ಖಾನೆಯ ಕಾರ್ಮಿಕರ ಬಗ್ಗೆ ಸಂಪೂರ್ಣ ವಿವರ ಪಡೆದು, ಯೋಜನಾ ವರದಿ ಸರ್ಕಾರಕ್ಕೆ ಸಲ್ಲಿಸಿ ಕಾರ್ಮಿಕರ ಸಮಸ್ಯೆಗೆ ಶೀಘ್ರ ಪರಿಹಾರ ಹುಡುಕುವುದಾಗಿ ಹೇಳಿದರು. ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೆ.ವೆಂಕಟರಾಮ್, ವ್ಯವಸ್ಥಾಪಕರಾದ ಕುಮಾರ್, ಎಸ್.ನಾರಾಯಣ್, ಪಿ.ರಂಗಸ್ವಾಮಿ, ಕೆ.ನಾರಾಯಣ್, ಸಿ.ಎ.ಬಸವಣ್ಣ, ಪಿ.ಸುಬ್ರಹ್ಮಣ್ಯ, ಬಿ.ಶಿವಕುಮಾರ್, ಉಮೇಶ್, ಶಿವರಾಮ್, ಸಮಯಪಾಲಕ ರಾಮಣ್ಣ, ಕಾರ್ಮಿಕರು ಹಾಜರಿದ್ದರು.