ಕೊಳ್ಳೇಗಾಲ: ಕಾಡುಪ್ರಾಣಿಗಳನ್ನು ಬೇಟೆಯಾಡಲು ಅರಣ್ಯದೊಳಗೆ ಅತಿಕ್ರಮಣ ಮಾಡಿದ ಇಬ್ಬರು ಬೇಟೆಗಾರರನ್ನು ತಾಲೂಕಿನ ಪ್ರಕಾಶ್ಪಾಳ್ಯ ಬಳಿಯ ಅರಣ್ಯದಲ್ಲಿ ಬಂಧಿಸಿದ್ದಾರೆ.
ದೊಡ್ಡಿಂದುವಾಡಿಯ ಜಾವಿದ್ ಹಾಗೂ ಅಬ್ರಾರ್ ಎಂಬವರು ಆರೋಪಿಗಳು. ಬಂಧಿತರು ಪ್ರಕಾಶ್ಪಾಳ್ಯದ ಸಮೀಪದ ನಾಲಾ ಬದಿಯ ಬೋಳಿಗುಡ್ಡ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೊಂಚು ಹಾಕಿದ್ದರು. ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲದ ಸಿಐಡಿ ಅರಣ್ಯ ಸಂಚಾರಿ ದಳದ ಪಿಎಸ್ಐ ಮಹೇಶ್ ಮತ್ತು ಸಿಬ್ಬಂದಿ ದಾಳಿ ಮಾಡಿ, ಅವರಿಂದ 1 ಹೀರೋ ಹೊಂಡಾ ಬೈಕ್, 1 ನಾಡ ಬಂದೂಕು, ಮದ್ದು ಗುಂಡುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.