ಚಾಮರಾಜನಗರ

ಸುಮತಿಗೆ ಚದುರಂಗ ಪ್ರಶಸ್ತಿ

ಮೈಸೂರು: ಕೆ.ಆರ್. ಪ್ರತಿಷ್ಠಾನ ನಡೆಸಿದ ಜಿಲ್ಲಾ ಮಟ್ಟದ ಶ್ರೇಯಾಂಕ ರಹಿತ 15 ವರ್ಷದೊಳಗಿನ ಆಟಗಾರರ ಚದುರಂಗ ಪಂದ್ಯಾವಳಿಯಲ್ಲಿ ನಂಜನಗೂಡು ತಾಲೂಕು ಕಳಲೆ ಗ್ರಾಮದ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸುಮತಿ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿ. ಆಕಾಶ್ ದ್ವಿತೀಯ ಮತ್ತು ಎಸ್. ಸಂಜಿತ್ ತೃತೀಯ ಸ್ಥಾನ ಪಡೆದ್ದಾರೆ. ಇದೇ ಪಂದ್ಯಾವಳಿಯ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಂಜನಗೂಡು ತಾಲೂಕು ಕಳಲೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಡಿ. ಚಾಂದಿನಿ ಪ್ರಥಮ ಸ್ಥಾನ ಮತ್ತು ಎಂ. ಸುಪ್ರಜಾ ದ್ವಿತೀಯ, ಎಸ್. ಅರುಣ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಟಿ.ಕೆ. ಚಂದನಾ ಪ್ರಸಾದ್ ಪ್ರಥಮ ಸ್ಥಾನ, ಸಿ. ವಾಸುದೇವ್ ದ್ವಿತೀಯ ಮತ್ತು ಎಸ್.ಡಿ. ಕುಶಾಲ ತೃತೀಯ ಸ್ಥಾನ ಪಡೆದಿದ್ದಾರೆ. ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 54 ಬಾಲಕ ಬಾಲಕಿಯರು ಭಾಗವಹಿಸಿದ್ದರು.
17 ರಂದು ರಾಜ್ಯ ಮಟ್ಟದ ಜಾನಪದ ಕಲಾಮೇಳ
ಮೈಸೂರು: ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಫೆ. 17 ರಂದು ನಡೆಯಲಿರುವ ರಥಸಪ್ತಮಿ ಅಂಗವಾಗಿ ರಾಜ್ಯಮಟ್ಟದ ಜಾನಪದ ಕಲಾವೇಳ ಆಯೋಜಿಸಲಾಗಿದೆ. ವಿಶ್ವ ಹಿಂದೂಧರ್ಮ ಸಂರಕ್ಷಣಾ ವೇದಿಕೆ ಮೈಸೂರು ಜಿಲ್ಲಾ ಘಟಕವು ಮೇಲುಕೋಟೆಯ ಸ್ಥಾನಿಕಂ ಪ್ರಕಾಶನದ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಅಂದು ಬೆಳಗ್ಗೆ 6.30 ಕ್ಕೆ ರಥಸಪ್ತಮಿಗೆ ವೈದ್ಯಕೀಯ ಶಿಕ್ಷಣ ಸಚಿವ ಎಸ್. ಎ. ರಾಮದಾಸ್ ಚಾಲನೆ ನೀಡುವರು. ಕಲಾಮೇಳವನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್  ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಉದ್ಘಾಟಿಸುವರು ಎಂದು ವೇದಿಕೆ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್. ಸ್ವಾಮಿಗೌಡ ತಿಳಿಸಿದ್ದಾರೆ.
ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಅಧ್ಯಕ್ಷತೆ ವಹಿಸುವರು. ಮಂಡ್ಯ ಜಿಲ್ಲಾಧಿಕಾರಿ  ಬಿ.ಎನ್. ಕೃಷ್ಣಯ್ಯ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಇ. ಮಾರುತಿರಾವ್ ಪವಾರ್, ಪ್ರೊಫೆಷನಲ್ ಕೊರಿಯರ್ ವ್ಯವಸ್ಥಾಪಕ ನಿರ್ದೇಶಕ ಎಸ್. ವೆಂಕಟೇಶ್, ಸಮಾಜ ಸೇವಕರಾದ ರಘು ಆಚಾರ್, ಅರುಣ್‌ಗೌಡ, ಬಿಜೆಪಿ ಮುಖಂಡ ಮಲ್ಲಪ್ಪಗೌಡ ಮುಂತಾದವರು ಅತಿಥಿಯಾಗಿ ಭಾಗವಹಿಸುವರು ಎಂದಿದ್ದಾರೆ.  ಪೂಜಾ ಕುಣಿತ, ಡೊಳ್ಳು, ಪಟಾ ಕುಣಿತ, ಚಂಡೆ, ನಗಾರಿ, ನಂದಿಕಂಬ, ಕೋಲಾಟ, ಕಂಸಾಳೆ, 40 ಕ್ಕೂ ಹೆಚ್ಚಿನ ಕಲಾ ತಂಡಗಳು ಪ್ರದರ್ಶನ ನೀಡುವರು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!