ಚಾಮರಾಜನಗರ

ತಾಪಂ ಸಾಮಾನ್ಯ ಸಭೆ ಮುಂದೂಡಿಕೆ

ಚಾಮರಾಜನಗರ: ಸ್ಥಾಯಿಸಮಿತಿ ರಚಿಸಿಲ್ಲ, ಸಭಾ ನೊಟೀಸ್‌ನ್ನು ಸರಿಯಾಗಿ ತಲುಪಿಸಿಲ್ಲ ಎಂದು ತಾಪಂ ಸದಸ್ಯರು ಅಕ್ರೋಶ ವ್ಯಕ್ತಪಡಿಸಿದ್ದರಿಂದಾಗಿ ಫೆ.15ರಂದು ನಡೆಯಬೇಕಾಗಿದ್ದ ಸಾಮಾನ್ಯ ಸಭೆಯನ್ನು ಮುಂದೂಡಲಾಯಿತು.ತಾಪಂ ಸಭಾಂಗಣದಲ್ಲಿ ಸಭೆಗೆ ಅಧ್ಯಕ್ಷ ಬಸವಣ್ಣ, ಉಪಾಧ್ಯಕ್ಷೆ ಪಾರ್ವತಮ್ಮ, ಇಒ ಕೃಷ್ಣ ಬರುತ್ತಿದ್ದಂತೆ, ಸದಸ್ಯರಾದ ಮಹದೇವು, ಚಿಕ್ಕಮಹದೇವ ಅವರು, ಸಭಾನಡಾವಳಿ ಪಾಲಿಸದೆ, ಸಾಮಾನ್ಯ ಸಭೆ ಕರೆದಿರುವುದು ಸರಿಯಲ್ಲ ಎಎಂದು ಆರೋಪಿಸಿದ ಕಾರಣ ಅಧ್ಯಕ್ಷ ಬಸವಣ್ಣ ಸಭೆಯನ್ನು ಮುಂದೂಡಿದರು.
ಅರ್ಜಿ  ಆಹ್ವಾನ
ಚಾಮರಾಜನಗರ: ಜಿಲ್ಲೆಯಲ್ಲಿ ವಿವಿಧ ತೋಟದ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದಾದ ಔಷಧೀಯ ಬೆಳೆಗಳ ಕುರಿತು ಫೈಟೋ ಕೆಮಿಕಲ್ ಅನಾಲಿಸಿಸ್‌ಗೆ ಸಂಬಂಧಿಸಿದ ಸಂಶೋಧನೆಗಾಗಿ ಬೈಬ್ಯಾಕ್ ವ್ಯವಸ್ಥೆ ಇರುವ ಖಾಸಗಿ ಕಂಪನಿಗಳಿಗೆ ನೀಡಲಿರುವ ಸಹಾಯಧನಕ್ಕಾಗಿ ರಾಷ್ಟ್ರೀಯ ಔಷಧ ಬೆಳೆ ಮಂಡಳಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಖಾಸಗಿ ಕಂಪನಿಗಳು ಔಷಧೀಯ ಬೆಳೆಗಳ ಕುರಿತು ಯೋಜನಾ ವರದಿ ತಯಾರಿಸಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಶೇ.50ರಷ್ಟು ಸಹಾಯಧನವನ್ನು ಇಲಾಖೆ ಖಾಸಗಿ ಕಂಪನಿಗಳಿಗೆ ನೀಡಲಿದೆ. ರೋಗ ಮತ್ತು ಕೀಟ ನಿರ್ವಹಣೆಗಾಗಿ ಸಾವಯವ ಕೀಟನಾಶಕಗಳನ್ನೇ ಬಳಸಬೇಕು. ಸಹಾಯಧನ ಸೌಲಭ್ಯ ಅರ್ಜಿ ಸಲ್ಲಿಕೆ ಹಾಗೂ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿ ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!