ಬೇಗೂರು: ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕೋಟೆಕೆರೆ ಗ್ರಾಮದ ಪಿ.ಮಹೇಶ್ ಎಂಬುವರ ಜಮೀನನಲ್ಲಿ ಭಾನುವಾರ ಶಾರ್ಟ್ ಸರ್ಕ್ಯೂಟ್ನಿಂದಾಗಿ ಪಂಪ್ಹೌಸ್ ಭಸ್ಮವಾಗಿದೆ. ಭಾನುವಾರ ಕರೆಂಟ್ ಬಂದ ವೇಳೆ ಇದ್ದಕ್ಕಿದ್ದಂತೆ ಪಂಪ್ಹೌಸ್ ಮತ್ತು ಗುಡಿಸಲು ಭಸ್ಮವಾಗಿದ್ದು, ಲಕ್ಷಾಂತರ ರು. ನಷ್ಟವಾಗಿದೆ. ಬೇಗೂರು ದಫೇದಾರ್ ವಿಶ್ವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.